ಬೆಳಗಾವಿ ಬಳಿ ಮಹಾರಾಷ್ಟ್ರ ಸಾರಿಗೆ ಬಸ್ ಮೇಲೆ ದಾಳಿ ; ಕರ್ನಾಟಕ - ಮಹಾರಾಷ್ಟ್ರ ನಡುವಿನ ಬಸ್ ಸೇವೆ ಸ್ಥಗಿತ

Update: 2025-02-22 23:28 IST
ಬೆಳಗಾವಿ ಬಳಿ ಮಹಾರಾಷ್ಟ್ರ ಸಾರಿಗೆ ಬಸ್ ಮೇಲೆ ದಾಳಿ ; ಕರ್ನಾಟಕ - ಮಹಾರಾಷ್ಟ್ರ ನಡುವಿನ ಬಸ್ ಸೇವೆ ಸ್ಥಗಿತ

ಸಾಂದರ್ಭಿಕ ಚಿತ್ರ

  • whatsapp icon

ಬೆಳಗಾವಿ : ಬೆಳಗಾವಿ ಬಳಿ ಮಹಾರಾಷ್ಟ್ರ ಸಾರಿಗೆ ಬಸ್ ಮೇಲೆ ದಾಳಿ ನಡೆದ ನಂತರ ಕರ್ನಾಟಕ - ಮಹಾರಾಷ್ಟ್ರ ನಡುವಿನ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ.

ಶನಿವಾರ ಸಂಜೆ 7 ಗಂಟೆಯಿಂದ KSRTC ಮತ್ತು MSRTC ಗೆ ಸೇರಿದ ಎರಡೂ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಬಳಿ MSRTC ಬಸ್ ಮೇಲೆ ದಾಳಿ ನಡೆದ ನಂತರ ಈ ಬೆಳವಣಿಗೆ ನಡೆದಿದೆ ಎಂದು ತಿಳಿದು ಬಂದಿದೆ.

ಪೊಲೀಸರ ಸೂಚನೆಯ ಮೇರೆಗೆ ಮಹಾರಾಷ್ಟ್ರಕ್ಕೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿದೆ ಎಂದು NWKRTC ವಿಭಾಗೀಯ ನಿಯಂತ್ರಕ, ಬೆಳಗಾವಿ ರಾಜೇಶ್ ಹುದ್ದಾರ್ ಹೇಳಿದ್ದಾರೆ. ರಾಜ್ಯದ ಬಸ್‌ಗಳು ಗಡಿಭಾಗದ ನಿಪ್ಪಾಣಿ ತಾಲ್ಲೂಕಿನ ಕೊಗ್ನೋಲಿ ವರೆಗೆ ಚಲಿಸಿದವು. MSRTC ಬಸ್‌ಗಳು ಕೊಗ್ನೋಲಿಯಿಂದ ಮಹಾರಾಷ್ಟ್ರದ ಕಡೆಗೆ ವಾಪಾಸ್ ಆದವು ಎನ್ನಲಾಗಿದೆ.

ಬೆಳಗಾವಿ ವಿಭಾಗದಿಂದ ಒಟ್ಟು 90 ಮತ್ತು NWKRTC ಯ ಚಿಕ್ಕೋಡಿ ವಿಭಾಗದಿಂದ 125 ಬಸ್‌ಗಳು ಮಹಾರಾಷ್ಟ್ರಕ್ಕೆ ಸಂಚರಿಸುತ್ತವೆ. MSRTC ಯ ಇಪ್ಪತ್ತು ಬಸ್‌ಗಳು ಬೆಳಗಾವಿ ವಿಭಾಗಕ್ಕೆ ಮತ್ತು 70 ಬಸ್‌ಗಳು ಚಿಕ್ಕೋಡಿ ವಿಭಾಗಕ್ಕೆ ಚಲಿಸುತ್ತವೆ.

ಶುಕ್ರವಾರದಂದು, ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲಾ ಕೇಂದ್ರ ಪಟ್ಟಣದ ಹೊರವಲಯದಲ್ಲಿ, ಮರಾಠಿಯಲ್ಲಿ ಪ್ರಯಾಣಿಕರೊಂದಿಗೆ ಮಾತನಾಡದಿದ್ದಕ್ಕಾಗಿ ಕರ್ನಾಟಕ ಸಾರಿಗೆ ನಿಗಮದ ಬಸ್‌ ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News