ಮುಂದಿನ ವಾರದೊಳಗೆ ಗಾಝಾದಲ್ಲಿ ಯುದ್ಧವಿರಾಮ: ಬೈಡನ್ ವಿಶ್ವಾಸ
Update: 2024-02-27 02:20 GMT
ನ್ಯೂಯಾರ್ಕ್: ಯುದ್ಧಪೀಡಿತ ಗಾಝಾದಲ್ಲಿ ಮುಂದಿನ ವಾರದ ಆರಂಭದ ಒಳಗಾಗಿ ಶಾಂತಿ ಒಪ್ಪಂದ ಏರ್ಪಡುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಫೆಲಸ್ತೀನ್ ಭಾಗದಲ್ಲಿ ಮಾನವೀಯ ಬಿಕ್ಕಟ್ಟು ತಾಕಕ್ಕೇರಿದ ಹಿನ್ನೆಲೆಯಲ್ಲಿ ಈಜಿಪ್ಟ್, ಕತಾರ್, ಅಮೆರಿಕ, ಫ್ರಾನ್ಸ್ ದೇಶಗಳು ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಧಾನಕ್ಕೆ ಮುಂದಾಗಿವೆ. ಯುದ್ಧವನ್ನು ಕೊನೆಗೊಳಿಸಿ, ಗಾಝಾದಲ್ಲಿ ಸೆರೆಹಿಡಿದಿದ್ದ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಯತ್ನ ನಡೆಸುತ್ತಿವೆ.
ಒಪ್ಪಂದದಲ್ಲಿ ಪ್ರಮುಖವಾಗಿ ಒತ್ತೆಯಾಳುಗಳ ವಿನಿಮಯ ಮತ್ತು ನೂರಾರು ಸಂಖ್ಯೆಯಲ್ಲಿ ಇಸ್ರೇಲ್ ಬಂಧಿಸಿರುವ ಫೆಲಸ್ತೀನಿಗಳ ಬಿಡುಗಡೆ ವಿಷಯ ಸೇರಿದೆ. ಒಪ್ಪಂದ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದ್ದಾರೆ ಎಂದು ಬೈಡನ್ ದೃಢಪಡಿಸಿದ್ದಾರೆ.
ಮುಂದಿನ ಸೋಮವಾರ ಕದನ ವಿರಾಮ ಏರ್ಪಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.