ಚಂದ್ರಯಾನ-3 ಲ್ಯಾಂಡಿಂಗ್ ಹಿನ್ನೆಲೆ: 'ಜೈ ಹೋ ಇಸ್ರೊ' ಮರಳುಶಿಲ್ಪ

Update: 2023-08-23 03:13 GMT
Photo:  twitter.com/sudarsansand

ಭುವನೇಶ್ವರ: ಚಂದ್ರಯಾನ-3 ಸುಲಲಿತವಾಗಿ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಘಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ವಿನೂತನ ಕಲಾಕೃತಿಯ ಮೂಲಕ ಇಸ್ರೋಗೆ ಶುಭ ಹಾರೈಸಿದ್ದಾರೆ.

ಚಂದ್ರಯಾನ-3ಯ ಲ್ಯಾಂಡರ್ ಮಾಡ್ಯೂಲ್ ಅಂದರೆ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್, ಬುಧವಾರ ಸಂಜೆ 6.04 ಗಂಟೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆ ಇದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸುಲಲಿತವಾಗಿ ಇಳಿಯುವ ಪಟ್ನಾಯಕ್ ಕಲಾಕೃತಿ, ಭಾರತೀಯ ಧ್ವಜ ಚಂದ್ರನ ಮೇಲೆ ಹಾರುತ್ತಿರುವುದನ್ನು ಬಿಂಬಿಸಿದೆ. "ಆಲ್ ದಿ ಬೆಸ್ಟ್ ಚಂದ್ರಯಾನ" ಎಂದು ಕಲಾಕೃತಿಯ ಕೆಳಗೆ ಶೀರ್ಷಿಕೆ ನೀಡಲಾಗಿದ್ದು, ಎಡ ತುದಿಯಲ್ಲಿ "ಜೈ ಹೋ ಇಸ್ರೊ" ಎಂದು ಬರೆಯಲಾಗಿದೆ.

2023ರ ಜುಲೈ 14ರಂದು ಚಂದ್ರಯಾನ-3 ಮಿಷನ್ ಯಶಸ್ವಿ ಉಡಾವಣೆಯಾಗಿದ್ದು, ಇದೀಗ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ವೇದಿಕೆ ಸಜ್ಜಾಗಿದೆ. ಇಸ್ರೊದ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿರುವ ದೇಶದ ಜನತೆ ಉಸಿರು ಬಿಗಿಹಿಡಿದು ಈ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News