ಚಂದ್ರಯಾನ-3 ರೋವರ್ 'ಸ್ಲೀಪ್ ಮೋಡ್ 'ಗೆ ಇರಿಸಲಾಗಿದೆ: ಇಸ್ರೋ

Update: 2023-09-03 05:18 GMT

ಶ್ರೀಹರಿಕೋಟಾ : ಚಂದ್ರಯಾನ 3 ರ ರೋವರ್ 'ಪ್ರಜ್ಞಾನ್' ಚಂದ್ರನ ಮೇಲ್ಮೈಯಲ್ಲಿ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಅದನ್ನು ಸ್ಲೀಪ್ ಮೋಡ್ ಗೆ ಇರಿಸಲಾಗಿದೆ ಎಂದು ಇಸ್ರೋ ಶನಿವಾರ ತಿಳಿಸಿದೆ.

ಸೋಲರ್ ಮಿಷನ್ ನ ರೋವರ್ ಮತ್ತು ಲ್ಯಾಂಡರ್, 'ಪ್ರಜ್ಞಾನ್' ಮತ್ತು 'ವಿಕ್ರಮ್' ಕ್ರಮವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚಂದ್ರನ ರಾತ್ರಿ ಸಮಯದ ಕನಿಷ್ಠ ತಾಪಮಾನ ತಡೆದುಕೊಳ್ಳಲು ಅವುಗಳನ್ನು ಶೀಘ್ರದಲ್ಲೇ "ಸ್ಲೀಮ್ ಮೋಡ್ ಗೆ" ಇರಿಸಲಾಗುವುದು ಎಂದು ಅದರ ಮುಖ್ಯಸ್ಥ ಎಸ್ . ಸೋಮನಾಥ್ ಹೇಳಿದ ಗಂಟೆಗಳ ನಂತರ ಬಾಹ್ಯಾಕಾಶ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

"ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಅದನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಮತ್ತು ಸ್ಲೀಪ್ ಮೋಡ್ ಗೆ ಹೊಂದಿಸಲಾಗಿದೆ. APXS ಮತ್ತು LIBS ಪೇಲೋಡ್ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್ ಗಳಿಂದ ಡೇಟಾವನ್ನು ಲ್ಯಾಂಡರ್ ಮೂಲಕ ಭೂಮಿಗೆ ರವಾನಿಸಲಾಗುತ್ತದೆ" ಎಂದು ISRO ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಅಪ್ಡೇಟ್ ಮಾಡಿದೆ. .

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News