ಚೆನ್ನೈ ಕಾರು ಚಾಲಕನ ಖಾತೆಗೆ ರೂ. 9,000 ಕೋಟಿ ಹಣ ಜಮಾ: ಮುಂದೇನಾಯಿತು?

Update: 2023-09-22 16:02 GMT

ಸಾಂದರ್ಭಿಕ ಚಿತ್ರ Photo: CANVA

ಚೆನ್ನೈ: ಚೆನ್ನೈನ ಕ್ಯಾಬ್ ಡ್ರೈವರ್ ಒಬ್ಬರ ಖಾತೆಗೆ ರೂ. 9,000 ಕೋಟಿ ಹಣ ಜಮಾ ಆಗಿರುವ ಘಟನೆಯೊಂದು ವರದಿಯಾಗಿದೆ. ತಮಿಳುನಾಡಿನ ಪಳನಿಯವರಾದ ಕ್ಯಾಬ್ ಚಾಲಕ ರಾಜ್ ಕುಮಾರ್ ಎಂಬವರ ಖಾತೆಗೆ ಸೆ. 9ರಂದು ಹಣ ಜಮಾ ಆಗಿದೆ ಎಂದು businesstoday.in ವರದಿ ಮಾಡಿದೆ.

India Today ಸುದ್ದಿ ಸಂಸ್ಥೆಯ ವರದಿ ಪ್ರಕಾರ, ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ನಿಂದ ಕ್ಯಾಬ್ ಚಾಲಕನ ಖಾತೆಗೆ ರೂ. 9,000 ಕೋಟಿ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಿದೆ. ಮೊದಲಿಗೆ ಅವರು ಇದೊಂದು ವಂಚನೆ ಇರಬಹುದು ಎಂದು ಭಾವಿಸಿದ್ದರು.

ಹಣ ಜಮಾದ ನೈಜತೆಯನ್ನು ಪರಿಶೀಲಿಸಲು ರಾಜ್ ಕುಮಾರ್ ತಮ್ಮ ಸ್ನೇಹಿತನೊಬ್ಬನ ಖಾತೆಗೆ ರೂ. 21,000ವನ್ನು ವರ್ಗಾಯಿಸಿದಾಗ ಅದು ಯಶಸ್ವಿಯಾಗಿದೆ. ಇದಾದ ನಂತರವಷ್ಟೇ ಸ್ವತಃ ತನ್ನ ಬ್ಯಾಂಕ್ ಶಾಖೆಯೇ ತನ್ನ ಖಾತೆಗೆ ಆ ಹಣವನ್ನು ವರ್ಗಾಯಿಸಿದೆ ಎಂದು ಅರ್ಥವಾಗಿದೆ.

ಆದರೆ, ಕೆಲವೇ ನಿಮಿಷಗಳಲ್ಲಿ ರಾಜ್ ಕುಮಾರ್ ಖಾತೆಯಲ್ಲಿದ್ದ ಬಾಕಿ ಮೊತ್ತವನ್ನು ಬ್ಯಾಂಕ್ ಕಡಿತಗೊಳಿಸಿದೆ.

ಕಳೆದ ವರ್ಷ ಇಂತಹುದೇ ಮತ್ತೊಂದು ಪ್ರಕರಣದಲ್ಲಿ, ಎಚ್‍ಡಿಎಫ್‍ಸಿ ಗ್ರಾಹಕರು ತಮ್ಮ ಖಾತೆಯಲ್ಲಿ ಹೆಚ್ಚುವರಿ ಮೊತ್ತವಿರುವ ಸಂದೇಶಗಳನ್ನು ಸ್ವೀಕರಿಸಿದ್ದರು. ಕೆಲವು ಖಾತೆಗಳಿಗೆ ರೂ. 13 ಕೋಟಿಯಷ್ಟು ಮೊತ್ತ ಜಮಾಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News