ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ಚಪ್ಪಲಿ ಎಸೆದು ಓಡಿಸಿದ ಛತ್ತೀಸ್‌ಗಢದ ವಿದ್ಯಾರ್ಥಿಗಳು

Update: 2024-03-26 13:12 GMT

Photo : X/@snehamordani

ಬಸ್ತಾರ್ : ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ವಿದ್ಯಾರ್ಥಿಗಳು ಚಪ್ಪಲಿ ಎಸೆದು ಓಡಿಸುವ ವೀಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಶಾಲಾ ಆವರಣಕ್ಕೆ ಶಿಕ್ಷಕನು ಅಮಲೇರಿದ ಸ್ಥಿತಿಯಲ್ಲಿ ಪ್ರವೇಶಿಸಿದಾಗ ವಿದ್ಯಾರ್ಥಿಗಳ ಗುಂಪು ಚಪ್ಪಲಿ ಎಸೆಯುವುದನ್ನು ವೀಡಿಯೊ ತೋರಿಸುತ್ತದೆ. ಶಿಕ್ಷಕ ಅಂತಿಮವಾಗಿ ತನ್ನ ಬೈಕಿನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.

X ನಲ್ಲಿ ವೀಡಿಯೊವನ್ನು ಹಂಚಿಕೊಂಡ ಪತ್ರಕರ್ತರೊಬ್ಬರು, “ಬಸ್ತಾರ್‌ನಲ್ಲಿ, ಶಿಕ್ಷಕನೊಬ್ಬ ಕುಡಿದು ಶಾಲೆಗೆ ಬಂದಾಗ ಮಕ್ಕಳು ಸರಿಯಾಗಿ ಪಾಠ ಕಲಿಸಿದ್ದಾರೆ. ಕುಡಿದ ಅಮಲಿನಲ್ಲಿ ಶಿಕ್ಷಕನು ಮಕ್ಕಳನ್ನು ನಿಂದಿಸಿನು. ಇದರಿಂದ ಬೇಸತ್ತ ಮಕ್ಕಳು ಶೂ, ಚಪ್ಪಲಿ ಎಸೆದು ಆತನನ್ನು ಶಾಲೆಯಿಂದ ಓಡಿಸಿದ್ದಾರೆ. ಈ ಘಟನೆ ವೀಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.

ಈ ವೈರಲ್ ವೀಡಿಯೊಗೆ, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಛತ್ತೀಸ್‌ಗಢದಲ್ಲಿ ಪ್ರತಿದಿನ ಇಂತಹ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಇದಕ್ಕಾಗಿಯೇ ಸರ್ಕಾರವು ಶಾಲೆಗಳನ್ನು ನೋಡಿಕೊಳ್ಳಲು ಖಾಸಗಿ ಕಂಪನಿಗಳನ್ನು ನೇಮಿಸುತ್ತಿದೆ, ”ಎಂದು ಬಳಕೆದಾರರು ಬರೆದಿದ್ದಾರೆ. “90% ಫಲಿತಾಂಶ ನೀಡದ ಶಾಲೆಯ ಶಿಕ್ಷಕರನ್ನು 4 ವರ್ಷಗಳಲ್ಲಿ ತೆಗೆದುಹಾಕಬೇಕು. ಆ ಶಿಕ್ಷಕರ ರಿಪೋರ್ಟ್ ಕಾರ್ಡ್ ಮಕ್ಕಳಿಂದ ತೆಗೆದುಕೊಳ್ಳಬೇಕು. ಮಕ್ಕಳು ರಿಪೋರ್ಟ್ ಕಾರ್ಡ್ ನೀಡಿದರೆ ನಾವು 25% ಶಿಕ್ಷಕರನ್ನು ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಅವರನ್ನು ಮನೆಗೆ ಕಳುಹಿಸಬೇಕು, ”ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

“ಮೊದಲನೆಯದಾಗಿ, ಬಸ್ತಾರ್‌ನಲ್ಲಿ ಕಡಿಮೆ ಶಿಕ್ಷಕರಿದ್ದಾರೆ ಮತ್ತು ಎರಡನೆಯದಾಗಿ, ಈ ಸ್ಥಿತಿ! ಶಿಕ್ಷಣ ಇಲಾಖೆಯು ಇಲ್ಲಿಯ ಸ್ಥಿತಿಯ ಬಗ್ಗೆ ಗಮನಹರಿಸಬಹುದಿತ್ತು ” ಎಂದು ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದರು.

ಕಳೆದ ತಿಂಗಳು ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಕುಡಿದು, ಮದ್ಯದ ಬಾಟಲಿಯನ್ನು ಜೇಬಿನಲ್ಲಿ ಇಟ್ಟುಕೊಂಡು ಶಾಲೆ ಪ್ರವೇಶಿಸಿದ ವೀಡಿಯೊವೊಂದು ವೈರಲ್ ಆಗಿತ್ತು.

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News