ಮಹುವಾ ಮೊಯಿತ್ರಾ ವಿರುದ್ಧದ ಪ್ರಕರಣ: ಸ್ಪೀಕರ್‌ಗೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಪತ್ರ

Update: 2023-12-02 10:27 GMT

ಮಹುವಾ ಮೊಯಿತ್ರಾ

ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಲೋಕಸಭೆಯ ನೈತಿಕತೆ ಸಮಿತಿಯ ಕಾರ್ಯಾಚರಣೆ ಕುರಿತಂತೆ ಕಾಂಗ್ರೆಸ್‌ ಪಕ್ಷದ ಲೋಕಸಭಾ ನಾಯಕ ಅಧೀರ್‌ ರಂಜನ್‌ ಚೌಧುರಿ ಅವರು ಶನಿವಾರ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಪುನರಾವಲೋಕಿಸಿ ಸಂಸದೀಯ ಸಮಿತಿಗಳ ಕಾರ್ಯಾಚರಣೆಗಳ ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸಬೇಕೆಂದು ಅವರು ಕೋರಿದ್ದಾರೆ.

ಶಿಕ್ಷೆ ವಿಧಿಸುವಂತಹ ವಿಚಾರಗಳಲ್ಲಿ ಸವಲತ್ತುಗಳ ಸಮಿತಿ ಮತ್ತು ನೈತಿಕತೆ ಸಮಿತಿಗೆ ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ತಮ್ಮ ನಾಲ್ಕು ಪುಟಗಳ ಪತ್ರದಲ್ಲಿ ಚೌಧುರಿ ಹೇಳಿದ್ದಾರೆ. ಅಷ್ಟೇ ಅಲ್ಲದೆ “ನೈತಿಕವಲ್ಲದ ವರ್ತನೆ” ಮತ್ತು “ನೀತಿ ಸಂಹಿತೆ” ಕುರಿತು ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದೂ ಅವರು ಹೇಳಿದ್ದಾರೆ ಹಾಗೂ ತಮ್ಮ ಈ ಅಭಿಪ್ರಾಯ ತಮ್ಮ ವೈಯಕ್ತಿಕ ಅಭಿಪ್ರಾಯವೆಂದೂ ಅವರು ತಿಳಿಸಿದ್ದಾರೆ.

ಚೌಧುರಿ ಅವರು ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಮೊಯಿತ್ರಾ ಅವರನ್ನು ವಜಾಗೊಳಿಸುವ ಶಿಫಾರಸನ್ನು ಒಳಗೊಂಡಿರುವ ಲೋಕಸಭೆಯ ನೈತಿಕತೆ ಸಮಿತಿಯ ವರದಿಯನ್ನು ಸೋಮವಾರ ಸದನದ ಮುಂದೆ ಮಂಡಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News