ಕುವೈತ್‌ ಅಗ್ನಿ ದುರಂತ: 45 ಮಂದಿ ಭಾರತೀಯರ ಪಾರ್ಥಿವ ಶರೀರ ಸ್ವದೇಶಕ್ಕೆ

Update: 2024-06-14 02:43 GMT

ಅಗ್ನಿ ದುರಂತಕ್ಕೀಡಾದ ಕಟ್ಟಡ  Photo: NDtv

Read More:

https://www.varthabharati.in/National/did-sole-breadwinner-die-in-kuwait-fire-kerala-family-awaits-confirmation-2014350

ಹೊಸದಿಲ್ಲಿ: ಕುವೈತ್ ನಲ್ಲಿ ನಡೆದ ಭೀಕರ ಅಗ್ನಿದುರಂತದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನ ಇಂದು ಮುಂಜಾನೆ ಕೊಚ್ಚಿಗೆ ಹೊರಟಿದೆ.

ಸಂತ್ರಸ್ತ ಭಾರತೀಯರ ಪಾರ್ಥಿವ ಶರೀರದೊಂದಿಗೆ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರೂ ಇದ್ದಾರೆ. ಭಾರತೀಯರ ಶವಗಳನ್ನು ಕ್ಷಿಪ್ರವಾಗಿ ಸ್ವದೇಶಕ್ಕೆ ತರಲು ಅಗತ್ಯ ಪ್ರಕ್ರಿಯೆಗಳ ಬಗ್ಗೆ ಕುವೈತ್ ಅಧಿಕಾರಿಗಳ ಜತೆ ನಿಕಟವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸಚಿವರು ಘಟನಾ ಸ್ಥಳಕ್ಕೆ ತೆರಳಿದ್ದರು.

ಸಂತ್ರಸ್ತ ಭಾರತೀಯರಲ್ಲಿ ಉತ್ತರ ಪ್ರದೇಶದ ವಾರಾಣಾಸಿಯ ಪ್ರವೀಣ್ ಮಾಧವ್ ಸಿಂಗ್, ಗೋರಖ್ಪುರದ ಜೈರಾಮ್ ಗುಪ್ತಾ ಮತ್ತು ಅಂಗದ್ ಗುಪ್ತಾ ಸೇರಿದ್ದಾರೆ. ಪಶ್ಚಿಮ ಬಂಗಾಳದ ಮಿಡ್ನಾಪುರದ ದ್ವಾರಕೀಶ್ ಪಟ್ನಾಯಕ್ ಕೂಡಾ ಘಟನೆಯಲ್ಲಿ ಮೃತಪಟ್ಟಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ಪುತ್ರಿಯ ಜನ್ಮದಿನ ಸಮಾರಂಭಕ್ಕಾಗಿ ಆಗಮಿಸಬೇಕಿದ್ದ ಅವರು ಪ್ರಯಾಣವನ್ನು ಮುಂದೂಡಿದ್ದರು. ಗುರುವಾರದ ಸುದ್ದಿ ತಲುಪುತ್ತಿದ್ದಂತೆ ಅವರ ಪುತ್ರಿ ಮತ್ತು ಪತ್ನಿ ಆಘಾತಕ್ಕೆ ಒಳಗಾಗಿದ್ದಾರೆ. ದ್ವಾರಕೀಶ್ ಎರಡು ದಶಕಗಳಿಂದ ಕುವೈತ್ ನಲ್ಲಿದ್ದರು.

ಗಾಯಗೊಂಡ ಭಾರತೀಯರ ಚಿಕಿತ್ಸೆಗೆ ನೆರವಾಗಲು ಮತ್ತು ಪಾರ್ಥಿವ ಶರೀರಗಳನ್ನು ತ್ವರಿತವಾಗಿ ಭಾರತಕ್ಕೆ ಒಯ್ಯಲು ಅಗತ್ಯ ಪ್ರಕ್ರಿಯೆಗಳ ಸಲುವಾಗಿ ಸಚಿವ ಕೀರ್ತಿವರ್ಧನ್ ಸಿಂಗ್ ಗುರುವಾರ ಆಗಮಿಸಿದ್ದರು. ಮೃತಪಟ್ಟ ಕೇರಳಿಗರ ಶವಗಳು ಶುಕ್ರವಾರ ಮುಂಜಾನೆ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಮಿಸುವ ನಿರೀಕ್ಷೆ ಇದ್ದು, ಸಿಎಂ ಪಿಣರಾಯ್ ವಿಜಯನ್ ಮತ್ತು ಸಂಪುಟ ಸಹೋದ್ಯೋಗಿಗಳು ಶವಗಳನ್ನು ಸ್ವೀಕರಿಸಲು ಉಪಸ್ಥಿತರಿರುವರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News