ನನ್ನ ವಿರುದ್ಧ Times of India ಸುಳ್ಳು ಸುದ್ದಿ ಹರಡುತ್ತಿದೆ: ಪತ್ರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಧ್ರುವ್ ರಾಠಿ

Update: 2024-07-14 09:39 GMT

ಧ್ರುವ್ ರಾಠಿ (Photo:X/@dhruv_rathee)

ಹೊಸದಿಲ್ಲಿ: ʼದಿ ಟೈಮ್ಸ್ ಆಫ್ ಇಂಡಿಯಾʼ ನನ್ನ ಕುರಿತು ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಆರೋಪಿಸಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ತನ್ನ ಮುಖಪುಟದಲ್ಲಿ ಪ್ರಕಟಿಸಿರುವ ಪೋಸ್ಟ್ ತನ್ನದಲ್ಲ; ಬದಲಿಗೆ ನಕಲಿ ಖಾತೆಯದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ʼದಿ ಟೈಮ್ಸ್ ಆಫ್ ಇಂಡಿಯಾʼ ದಿನಪತ್ರಿಕೆಯನ್ನುದ್ದೇಶಿಸಿ ಪೋಸ್ಟ್ ಮಾಡಿರುವ ಧ್ರುವ್ ರಾಠಿ, " ಹೆಲೋ @timesofindia, ನಿಮ್ಮ ಪತ್ರಿಕೆಯ ಮುಖಪುಟವೇಕೆ ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ? ಈ ಪೋಸ್ಟ್ ಅನ್ನು ನಕಲಿ ಖಾತೆ ಮಾಡಿರುವುದನ್ನು ಕಣ್ಣು ಬಿಟ್ಟು ನೋಡಿ. ಈ ಪೋಸ್ಟ್‌ಗೂ, ನನಗೂ ಯಾವುದೇ ಸಂಬಂಧವಿಲ್ಲ" ಎಂದು ಬರೆದುಕೊಂಡಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತ ಪೋಸ್ಟ್ ಒಂದು ಧ್ರುವ್ ರಾಠಿ (ಪರೋಡಿ) ಖಾತೆಯ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿತ್ತು. ಆ ಪೋಸ್ಟ್ ಧ್ರುವ್ ರಾಠಿಯ ಅಧಿಕೃತ ಖಾತೆಯಿಂದಲೇ ಹಂಚಿಕೆಯಾಗಿದೆ ಎಂಬಂತೆ ದಿ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News