ಇಂದಿನ ಯುವಜನತೆ ವೃದ್ಧರಾಗುವ ಮುನ್ನ ಅಖಂಡ ಭಾರತದ ಕನಸು ನನಸಾಗಬೇಕು: ಮೋಹನ್ ಭಾಗ್ವತ್

Update: 2023-09-07 04:32 GMT

ನಾಗ್ಪುರ: ಇಂದಿನ ಯುವಪೀಳಿಗೆ ವೃದ್ಧರಾಗುವ ಮುನ್ನ ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾದ ಘಟನಾವಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಅಗ್ರಸೇನಾ ವಿದ್ಯಾರ್ಥಿ ಹಾಸ್ಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮೀಸಲಾತಿಯನ್ನು ಬಲವಾಗಿ ಸಮರ್ಥಿಸಿಕೊಂಡರು. ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟರು.

"ನಿಮಗೆ ವಯಸ್ಸಾಗುವ ಮುನ್ನ ನೀವು ಅಖಂಡ ಭಾರತದ ಪರಿಕಲ್ಪನೆ ಸಾಕಾರಗೊಳ್ಳುವುದಕ್ಕೆ ಸಾಕ್ಷಿಯಾಗಲಿದ್ದೀರಿ. ಇದಕ್ಕೆ ಪೂರಕವಾದ ಘಟನಾವಳಿಗಳು ರೂಪುಗೊಳ್ಳುತ್ತಿವೆ. ಭಾರತದಿಂದ ಬೇರ್ಪಟ್ಟವರಿಗೆ ಈಗ ಅವರ ತಪ್ಪು ಅರಿವಾಗುತ್ತಿದೆ. ಭಾರತದ ಸ್ವರೂಪವನ್ನು ನಾವು ಒಪ್ಪಿಕೊಳ್ಳಬೇಕು. ಇದು ಕೇವಲ ನಕ್ಷೆಯಲ್ಲಿ ರೇಖೆಗಳನ್ನು ಅಳಿಸುವುದು ಮಾತ್ರವಲ್ಲ. ಭಾರತದ ಅಂತರ್ಗತ ಸ್ವರೂಪವನ್ನು ಒಪ್ಪಿಕೊಳ್ಳುವುದು. ಈ ಸ್ವರೂಪವನ್ನು ಒಪ್ಪಿಕೊಂಡಾಗ, ಯಾವ ಬದಲಾವಣೆಯೂ ಅಗತ್ಯ ಇರುವುದಿಲ್ಲ. ಪ್ರತಿಯೊಂದೂ ಸಹಜವಾಗಿಯೇ ಭಾರತದ ಜತೆ ಸಂಘಟಿತವಾಗುತ್ತದೆ ಎಂದು ವಿಶ್ಲೇಷಿಸಿದರು.

ಅಖಂಡ ಭಾರತವನ್ನು ಸೃಷ್ಟಿಸುವುದು ಎಂದರೆ ವಿಭಜನೆ ಪೂರ್ವ ಭಾರತ ಅಂದರೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶವನ್ನು ಒಳಗೊಂಡ ಪ್ರದೇಶವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News