ತಾಯಿಯನ್ನೇ ಕೊಂದು, ದೇಹದ ಭಾಗ ತಿಂದ ಪ್ರಕರಣದಲ್ಲಿ ಪುತ್ರನಿಗೆ ಮರಣದಂಡನೆ ಖಾಯಂಗೊಳಿಸಿದ ಹೈಕೋರ್ಟ್

Update: 2024-10-01 16:45 GMT

ಸಾಂದರ್ಭಿಕ ಚಿತ್ರ | PC : PTI 

ಮುಂಬೈ : ತನ್ನ ತಾಯಿಯನ್ನೇ ಕೊಂದು ದೇಹ ಭಾಗಗಳನ್ನು ತಿಂದ ಪ್ರಕರಣದ ದೋಷಿಗೆ ಕೊಲ್ಹಾಪುರ ನ್ಯಾಯಾಲಯ ನೀಡಿದ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಉಚ್ಚ ನ್ಯಾಯಾಲಯ ಮಂಗಳವಾರ ಖಾಯಂಗೊಳಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಹಾಗೂ ಪೃಥ್ವಿರಾಜ್ ಚೌಹಾಣ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ದೋಷಿ ಸುನಿಲ್ ಕೊಚುಕೊರವಿಗೆ ಮರಣ ದಂಡನೆಯನ್ನು ಖಾಯಗೊಳಿಸಿತು. ಅಲ್ಲದೆ, ಆತ ಸುಧಾರಣೆಯಾಗಲು ಯಾವುದೇ ಸಾಧ್ಯತೆ ಇಲ್ಲ ಎಂದು ಹೇಳಿತು.

ಇದು ನರಭಕ್ಷಕ ಪ್ರಕರಣ. ಈ ಪ್ರಕರಣ ಅಪರೂಪದಲ್ಲಿ ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುತ್ತದೆ ಎಂದು ಪೀಠ ಹೇಳಿತು.

‘‘ಇದು ಅಪರೂಪದಲ್ಲಿ ಅಪರೂಪದ ಪ್ರಕರಣಗಳ ಅಡಿಯಲ್ಲಿ ಬರುತ್ತದೆ. ದೋಷಿ ತನ್ನ ತಾಯಿಯನ್ನು ಹತ್ಯೆಗೈದಿರುವುದು ಮಾತ್ರವಲ್ಲ, ಬದಲಾಗಿ ಆತ ಆಕೆಯ ಮೃತದೇಹದ ಭಾಗಗಳಾದ ಮೆದುಳು, ಹೃದಯ, ಶ್ವಾಸಕೋಶ, ಮೂತ್ರಕೋಶ, ಕರುಳನ್ನು ಹೊರ ತೆಗೆದಿದ್ದಾನೆ. ಅದನ್ನು ಪ್ಯಾನ್‌ನಲ್ಲಿ ಹಾಕಿ ಬೇಯಿಸಿದ್ದಾನೆ’’ ಎಂದು ಉಚ್ಚ ನ್ಯಾಯಾಲಯ ಹೇಳಿದೆ.

ಆತ ಆಕೆಯ ಪಕ್ಕೆಲುಬುಗಳನ್ನು ಬೇಯಿಸಿದ್ದ ಹಾಗೂ ಆಕೆಯ ಹೃದಯವನ್ನು ಬೇಯಿಸಲು ಹೊರಟಿದ್ದ. ದೋಷಿಯಲ್ಲಿ ನರಭಕ್ಷಕನ ಪ್ರವೃತ್ತಿ ಇರುವುದರಿಂದ ಆತ ಸುಧಾರಣೆಯಾಗಲು ಯಾವುದೇ ಸಾಧ್ಯತೆ ಇಲ್ಲ. ಒಂದು ವೇಳೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಆತ ಇದೇ ಅಪರಾಧವನ್ನು ಕಾರಾಗೃಹದಲ್ಲಿ ಕೂಡ ಮಾಡುವ ಸಾಧ್ಯತೆ ಇದೆ ಎಂದು ಪೀಠ ಹೇಳಿತು.

ಕೊಲ್ಹಾಪುರದಲ್ಲಿ ಈ ಘಟನೆ ನಡೆದಿತ್ತು. ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ಸುನಿಲ್ ಕುಚಕೊರವಿ ತನ್ನ ತಾಯಿ ಯಲ್ಲಮ್ಮ ರಾಮ ಕುಚಕೊರವಿ (63) ಅವರನ್ನು 2017 ಆ. 28ರಂದು ಭೀಕರವಾಗಿ ಹತ್ಯೆ ಮಾಡಿದ್ದ. ಅನಂತರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ. ಅದರಲ್ಲಿ ಕೆಲವು ತುಂಡುಗಳನ್ನು ತಿಂದಿದ್ದ.

ವಿಚಾರಣೆ ನಡೆಸಿದ ಕೆಳ ಹಂತದ ನ್ಯಾಯಾಲಯ ಸುನಿಲ್ ಕುಚಕೊರವಿಗೆ 2021ರಲ್ಲಿ ಮರಣದಂಡನೆ ವಿಧಿಸಿತ್ತು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News