ಅಶೋಕ್ ಗೆಹ್ಲೋಟ್ ಜೊತೆಗಿನ ಅಸಮಾಧಾನ ಕೊನೆಗೊಳಿಸಿದ್ದೇನೆ ಎಂದ ಸಚಿನ್ ಪೈಲಟ್
ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಪೈಲಟ್, ಖರ್ಗೆ ಅವರು ಅಸಮಾಧಾನವನ್ನು 'ಕ್ಷಮಿಸಿ ಮತ್ತು ಮರೆತುಬಿಡಿ' ಮತ್ತು ಜೊತೆಯಾಗಿ ಮುಂದುವರಿಯಿರಿ ಎಂದು ಸಲಹೆ ನೀಡಿದ್ದಾರೆ ಎಂದಿದ್ದಾರೆ.
ಹೊಸದಿಲ್ಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಗಿನ ಅಸಮಾಧಾನವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಲಹೆ ಹಿನ್ನೆಲೆಯಲ್ಲಿ ಕೊನೆಗೊಳಿಸಿರುವುದಾಗಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಸಾಮೂಹಿಕ ನಾಯಕತ್ವವೇ ವಿಧಾನಸಭೆ ಚುನಾವಣೆಗೆ ಮುಂದಿರುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಪೈಲಟ್, ಖರ್ಗೆ ಅವರು ಅಸಮಾಧಾನವನ್ನು 'ಕ್ಷಮಿಸಿ ಮತ್ತು ಮರೆತುಬಿಡಿ' ಮತ್ತು ಜೊತೆಯಾಗಿ ಮುಂದುವರಿಯಿರಿ ಎಂದು ಸಲಹೆ ನೀಡಿದ್ದಾರೆ ಎಂದಿದ್ದಾರೆ.
"ಅಶೋಕ್ ಗೆಹ್ಲೋಟ್ ಜಿ ನನಗಿಂತ ಹಿರಿಯರು, ರಾಜಕೀಯದಲ್ಲಿ ಅವರಿಗೆ ಹೆಚ್ಚು ಅನುಭವವಿದೆ, ಅವರಿಗೆ ಮಹತ್ವದ ಜವಾಬ್ದಾರಿಗಳಿವೆ. ನಾನು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ, ನಾನು ಎಲ್ಲರನ್ನು ಜೊತೆಗೊಯ್ಯಲು ಪ್ರಯತ್ನಿಸಿದೆ. ಇಂದು ಗೆಹ್ಲೋಟ್ ಅವರೂ ಕೂಡ ಎಲ್ಲರನ್ನು ಜೊತೆಗೊಯ್ಯಲು ಪ್ರಯತ್ನಿಸುತ್ತಿದ್ದಾರೆ' ಎಂದು ಪೈಲಟ್ ಹೇಳಿದ್ದಾರೆ.