ನನ್ನ ಹೃದಯದಿಂದ ಮಾತನಾಡುತ್ತೇನೆ: ಅವಿಶ್ವಾಸ ನಿರ್ಣಯದಲ್ಲಿ ಮಾತು ಆರಂಭಿಸಿದ ರಾಹುಲ್ ಗಾಂಧಿ
ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಪ್ರತಿಪಕ್ಷಗಳ ಕಡೆಯಿಂದ ಅವಿಶ್ವಾಸ ನಿರ್ಣಯದ ಚರ್ಚೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ, "ಇಂದು ನಾನು ಹೃದಯದಿಂದ ಮಾತನಾಡುತ್ತೇನೆ" ಎಂದು ಹೇಳಿದರು.
ಸಭಾಧ್ಯಕ್ಷರೇ, ನನ್ನನ್ನು ಲೋಕಸಭೆಗೆ ಮರು ಪ್ರತಿಷ್ಠಾಪಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಕೊನೆಯ ಬಾರಿ ಮಾತನಾಡಿದಾಗ, ನಾನು ಬಹುಶಃ ನಿಮಗೆ ನೋವುಂಟು ಮಾಡಿದ್ದೇನೆ. ಆಗ ನಾನು ಅದಾನಿ ಮೇಲೆ ಹೆಚ್ಚು ಗಮನಹರಿಸಿದ್ದೇನೆ, ಇಂದು, ನಾನು ಅದಾನಿ ಬಗ್ಗೆ ಮಾತನಾಡುವುದಿಲ್ಲ ಬಿಜೆಪಿ ನೇತಾರರು ಭಯಪಡಬೇಡಿ" ಎಂದು ರಾಹುಲ್ ಗಾಂಧಿ ಹೇಳಿದರು
ನರೇಂದ್ರ ಮೋದಿ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಎರಡನೇ ದಿನವಾದ ಇಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತು ಪುನರಾರಂಭವಾಯಿತು. ಕಾಂಗ್ರೆಸ್ ಲೋಕಸಭೆ ಸಂಸದ ಗೌರವ್ ಗೊಗೊಯ್ ಅವರು ಮಂಗಳವಾರ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ಆರಂಭಿಸಿದ್ದು, ಪ್ರತಿಪಕ್ಷಗಳು ಮಣಿಪುರಕ್ಕಾಗಿ ಈ ನಿರ್ಣಯವನ್ನು ತಂದಿವೆ ಎಂದು ಹೇಳಿದ್ದರು. 16 ಗಂಟೆಗಳ ಚರ್ಚೆಯು ಗುರುವಾರ (ಆಗಸ್ಟ್ 10) ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ, ಆಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಉತ್ತರವನ್ನು ನೀಡುವ ನಿರೀಕ್ಷೆಯಿದೆ.