ಇಳಯರಾಜ ಪುತ್ರಿ ಭವತಾರಿಣಿ ಶ್ರೀಲಂಕಾದಲ್ಲಿ ನಿಧನ

Update: 2024-01-25 16:13 GMT

ಭವತಾರಿಣಿ ರಾಜಾ | timesofindia.indiatimes.com

ಚೆನ್ನೈ: ಸಂಗೀತ ಮಾಂತ್ರಿಕ ಇಳಯರಾಜ ಅವರ ಪುತ್ರಿ ಹಿನ್ನೆಲೆ ಗಾಯಕಿ ಭವತಾರಿಣಿ ರಾಜಾ ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಶ್ರೀಲಂಕಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಕೆಗೆ 47 ವರ್ಷ ವಯಸ್ಸಾಗಿತ್ತು.

ಇಳಯರಾಜ ಅವರ ತಂಡವು ಜನವರಿ 27 ಮತ್ತು 28 ರಂದು ಆಯೋಜಿಸಲಾದ ಸಂಗೀತ ಕಾರ್ಯಕ್ರಮಕ್ಕಾಗಿ ಶ್ರೀಲಂಕಾದಲ್ಲಿದೆ. ಭವತಾರಿಣಿ ಚಿಕಿತ್ಸೆಗಾಗಿ ಶ್ರೀಲಂಕಾದಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು TOI ವರದಿ ಮಾಡಿದೆ.

1995 ರಲ್ಲಿ ಇಳಯರಾಜಾ ಅವರು ರಚಿಸಿದ ರಾಸಯ್ಯ ಚಿತ್ರದಲ್ಲಿ "ಮಸ್ತಾನ ಮಸ್ತಾನಾ" ಹಾಡಿನ ಮೂಲಕ ಭವತಾರಿಣಿ ಪಾದಾರ್ಪಣೆ ಮಾಡಿದರು.

ಇಳಯರಾಜಾ ಅವರ ಸಂಗೀತ ಸಂಯೋಜನೆಯ ಭಾರತಿ ಚಿತ್ರದಲ್ಲಿನ "ಮಾಯಿಲ್ ಪೋಲ ಪೊನ್ನು ಒನ್ನು" ಹಾಡಿಗೆ ಅವರು ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಗೆದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News