ಬಿಜೆಪಿ ಪರ ಟಿವಿ ನಿರೂಪಕರು ನಡೆಸುವ ಚರ್ಚೆಗಳಿಗೆ ಪ್ರತಿನಿಧಿಗಳನ್ನು ಕಳುಹಿಸದಿರಲು ಇಂಡಿಯಾ ಮೈತ್ರಿಕೂಟ ನಿರ್ಧಾರ

Update: 2023-09-14 08:37 GMT

ಹೊಸದಿಲ್ಲಿ :ಆಡಳಿತ ಬಿಜೆಪಿಗೆ ಹತ್ತಿರದವರೆನ್ನಲಾದ ಟಿವಿ ನಿರೂಪಕರು ನಡೆಸುವ ಟಿವಿ ಚರ್ಚಾ ಕಾರ್ಯಕ್ರಮಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಇಂದು ಹೇಳಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿವಾಸದಲ್ಲಿ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯ ನಂತರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಮೇಲಿನ ಘೋಷಣೆ ಮಾಡಿದರು.

“ಸಮನ್ವಯ ಸಮಿತಿಯು ಮಾಧ್ಯಮದ ಕುರಿತಾದ ಉಪಗುಂಪು ಯಾವ ರೂಪಕರ ಕಾರ್ಯಕ್ರಮಕ್ಕೆ ಇಂಡಿಯಾ ಮೈತ್ರಿಕೂಟ ತನ್ನ ಪ್ರತಿನಿಧಿಗಳನ್ನು ಕಳುಹಿಸಬಾರದು ಎಂಬ ಕುರಿತು ನಿರ್ಧರಿಸಲಿದೆ,” ಎಂದು ಅವರು ಹೇಳಿದರು.

ಯಾರು ನಡೆಸುವ ಚರ್ಚಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಲಾಗುವುದು ಎಂಬ ಕುರಿತು ಯಾವುದೇ ನಿರ್ದಿಷ್ಟ ಹೆಸರುಗಳನ್ನು ವೇಣುಗೋಪಾಲ್‌ ಹೇಳಿಲ್ಲ.

ಆದರೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿ “ನಾನು ಪ್ರಮುಖವಾಗಿ ಗೋದಿ ಮೀಡಿಯಾ ಬಗ್ಗೆ ಹೇಳುತ್ತಿದ್ದೇನೆ. ಕೆಲ ನಿರೂಪಕರು ಸತತವಾಗಿ ಇಂಡಿಯಾ ಮೈತ್ರಿಕೂಟದ ವಿರುದ್ಧ ಮಾತನಾಡುತ್ತಾರೆ. ನಮ್ಮ ಪ್ರತಿನಿಧಿಗಳು ಅಲ್ಲಿಗೆ ಹೋಗುವುದಿಲ್ಲ,” ಎಂದರು.

ಆಪ್‌ ಸಂಸದ ರಾಘವ್‌ ಚಡ್ಡಾ ಅವರು ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿ “ಪ್ರಚೋದನಾತ್ಮಕ ಚರ್ಚೆಗಳನ್ನು ನಡೆಸುವ ನಿರೂಪಕರ ಕಾರ್ಯಕ್ರಮಗಳಿಗೆ ಹೋಗದೇ ಇರಲು ನಿರ್ಧರಿಸಲಾಗಿದೆ,” ಎಂದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News