ಭಾರತವು ಬಾಂಗ್ಲಾದೇಶದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ : ವಿದೇಶಾಂಗ ಕಾರ್ಯದರ್ಶಿ ಮಿಸ್ರಿ

Update: 2024-12-09 17:06 GMT
ಭಾರತವು ಬಾಂಗ್ಲಾದೇಶದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ : ವಿದೇಶಾಂಗ ಕಾರ್ಯದರ್ಶಿ ಮಿಸ್ರಿ
  • whatsapp icon

ಢಾಕಾ : ಭಾರತವು ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕವಾದ ರಚನಾತ್ಮಕ,ಪರಸ್ಪರ ಲಾಭದಾಯಕ ಸಂಬಂಧಗಳನ್ನು ಬಯಸುತ್ತದೆ. ನಾವು ಈ ಸಂಬಂಧವನ್ನು ಜನಕೇಂದ್ರಿತ ಮತ್ತು ಜನ ಆಧಾರಿತ ಸಂಬಂಧವನ್ನಾಗಿ ನೋಡುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ ಅವರು ಸೋಮವಾರ ಇಲ್ಲಿ ಹೇಳಿದರು.

ಆಗಸ್ಟ್‌ನಲ್ಲಿ ಶೇಖ್ ಹಸೀನಾರ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದ ಬೃಹತ್ ಕ್ರಾಂತಿಯ ಬಳಿಕ ಇದು ಬಾಂಗ್ಲಾದೇಶಕ್ಕೆ ಭಾರತದ ಉನ್ನತ ಅಧಿಕಾರಿಯೋರ್ವರ ಮೊದಲ ಭೇಟಿಯಾಗಿದೆ.

ಉಭಯ ದೇಶಗಳ ನಡುವಿನ ಸಂಬಂಧ ಹಳಸಿರುವ ನಡುವೆಯೇ ಮಿಸ್ರಿ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ಜಾಶಿಮುದ್ದೀನ್ ಅವರೊಂದಿಗೆ ಮಾತುಕತೆಗಳನ್ನು ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ,ಬಾಂಗ್ಲಾದೇಶದ ನಿಯೋಗದೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಮುಕ್ತ ಮತ್ತು ಪ್ರಾಮಾಣಿಕ ಮಾತುಕತೆಗಳನ್ನು ನಡೆಸಿರುವುದಾಗಿ ತಿಳಿಸಿದರು.

ಆಗಸ್ಟ್‌ನಲ್ಲಿ ಬಂಡಾಯದ ಬಳಿಕ ಹಸೀನಾರನ್ನು ದೇಶದಿಂದ ಹೊರದಬ್ಬಿದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಿಕಟ ಸಂಬಂಧ ಹಳಸಿದೆ. ಇತ್ತೀಚಿನ ವಾರಗಳಲ್ಲಿ ಹಿಂದುಗಳ ಮೇಲೆ ದಾಳಿಗಳು ಮತ್ತು ಹಿಂದು ಸನ್ಯಾಸಿ ಚಿನ್ಮಯ ಕೃಷ್ಣದಾಸ್ ಅವರ ಬಂಧನದ ಬಳಿಕ ಈ ಸಂಬಂಧ ಇನ್ನಷ್ಟು ಹದಗೆಟ್ಟಿದೆ.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News