ಲೇಹ್‌ - ಕಾರ್ಗಿಲ್:‌ 1000 ಕಿ.ಮೀ. ಬೈಕ್‌ ರೈಡ್‌ನ ವಿಡಿಯೋ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ

Update: 2023-09-14 16:19 GMT

 ರಾಹುಲ್‌ ಗಾಂಧಿ | Photo: twitter \ @RahulGandhi

ಲಡಾಖ್:‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲಡಾಖ್‌ನಲ್ಲಿ 1,000 ಕಿಮೀಗಳಷ್ಟು ದೂರ ಬೈಕ್‌ ರೈಡ್‌ ಮಾಡಿರುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

ಈ ಪ್ರಯಾಣದಲ್ಲಿ ಭವ್ಯವಾದ ದೃಶ್ಯಗಳನ್ನು ವೀಕ್ಷಿಸುತ್ತಾ, ಸ್ಥಳೀಯರೊಂದಿಗೆ ಸಂವಹನ ನಡೆಸುತ್ತಾ, ತನ್ನ ಜೀವಮಾನದ ಅತ್ಯಂತ ಸಂತಸ ದಾಯಕ ಸಮಯವನ್ನು ಕಳೆದಿರುವುದಾಗಿ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲೇಹ್‌ನಿಂದ ಲಡಾಖ್‌ನ ಕಾರ್ಗಿಲ್‌ಗೆ ಬೈಕ್‌ ಮೂಲಕ ಪ್ರಯಾಣಿಸಿದ್ದ ರಾಹುಲ್‌ ಗಾಂಧಿ, ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ತಮ್ಮ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರು.

ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆ ಗುವೇರಾ ಅವರನ್ನು ನೆನಪಿಸುವಂತೆ 'ಮೋಟಾರ್ ಸೈಕಲ್ ಡೈರೀಸ್' ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಬೈಕ್‌ ರೈಡ್‌ ವಿಡಿಯೋವನ್ನು ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ.

"ಪಂಗಾಂಗ್ ತ್ಸೋ ಸರೋವರವು ಭೂಮಿಯ ಮೇಲಿನ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನನ್ನ ತಂದೆ ಒಮ್ಮೆ ನನಗೆ ಹೇಳಿದ್ದರು" ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿರುವುದು ಕೇಳಬಹುದು.

ಲೇಹ್‌ನಿಂದ ಕಾರ್ಗಿಲ್‌ಗೆ ಪ್ರಯಾಣಿಸುವ ದಾರಿ ಮಧ್ಯೆ ರಾಹುಲ್‌ ಗಾಂಧಿ ಅವರು ಸ್ಥಳೀಯರು, ಮಾಜಿ ಸೈನಿಕರು, ಕರ್ತವ್ಯ ನಿರತ ಸೇನಾ ಸಿಬ್ಬಂದಿ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಅಧಿಕಾರಿಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸೇರಿದಂತೆ ಹಲವಾರು ಜನರನ್ನು ಭೇಟಿಯಾಗಿದ್ದಾರೆ.

ಲಡಾಖ್‌ನ ಸ್ಥಳೀಯರೊಂದಿಗೆ ಸಂವಾದ ನಡೆಸಿರುವ ರಾಹುಲ್‌ ಗಾಂಧಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ್ದಾರೆ. ಲಡಾಖ್‌ನ ಪ್ರಜಾಸತ್ತಾತ್ಮಕ ಧ್ವನಿಯನ್ನು ವರ್ಧಿಸಲು ನಾನು ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ ಎಂದು ರಾಹುಲ್‌ ಗಾಂಧಿ ಲಡಾಖ್ ನ ಜನತೆಯೊಂದಿಗೆ ಹೇಳಿದ್ದಾರೆ.


Full View


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News