ಐಫೋನ್‌ನಲ್ಲಿ ‘ದುರುದ್ದೇಶಪೂರಿತ ಸ್ಪೈವೇರ್’ ಎಚ್ಚರಿಕೆ: ಮೋದಿ ಸರಕಾರವನ್ನು ದೂಷಿಸಿದ ಕೆ.ಸಿ.ವೇಣುಗೋಪಾಲ್

Update: 2024-07-13 16:53 GMT

ಸಾಂದರ್ಭಿಕ ಚಿತ್ರ | PC : PTI 

 

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ‘ದುರುದ್ದೇಶಪೂರಿತ ಸ್ಪೈವೇರ್’ನ್ನು ಬಳಸಿಕೊಂಡು ತನ್ನ ಫೋನ್‌ನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಹಾಗೂ ಪಕ್ಷದ ಸಂಘಟನಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ಶನಿವಾರ ಆರೋಪಿಸಿದರು.

ಆ್ಯಪಲ್‌ನಿಂದ ಬಂದಿರುವ ಸಂದೇಶದ ಸ್ಕ್ರೀನ್‌ಶಾಟ್‌ನ್ನು ವೇಣುಗೋಪಾಲ ಹಂಚಿಕೊಂಡಿದ್ದಾರೆ. ಅವರ ಐಫೋನ್ ಮರ್ಸಿನರಿ ಸ್ಪೈವೇರ್ ದಾಳಿಗೆ ಗುರಿಯಾಗಿದೆ ಎಂದು ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಆ್ಯಪಲ್ 2023,ಅ.30ರಂದು ವೇಣುಗೋಪಾಲ ಅವರಿಗೆ ಎಚ್ಚರಿಕೆಯನ್ನು ನೀಡಿತ್ತು. ಇದು ಅದೇ ಎಚ್ಚರಿಕೆಯ ಪುನರಾವರ್ತನೆಯಲ್ಲ,ಇನ್ನೊಂದು ಹೊಸ ದಾಳಿ ಪತ್ತೆಯಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ತನ್ನ ಎಕ್ಸ್ ಪೋಸ್ಟ್‌ನಲ್ಲಿಮೋದಿಯವರನ್ನು ನೇರವಾಗಿ ಬೆಟ್ಟು ಮಾಡಿರುವ ವೇಣುಗೋಪಾಲ,‘ಪ್ರಧಾನಿ ಮೋದಿಯವರೇ,ನಿಮ್ಮ ಮೆಚ್ಚಿಗೆಯ ದುರುದ್ದೇಶಪೂರಿತ ಸ್ಪೈವೇರ್‌ನ್ನು ನನ್ನ ಫೋನಿಗೂ ಕಳುಹಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಈ ವಿಶೇಷ ಉಡುಗೊರೆಯ ಬಗ್ಗೆ ನನಗೆ ತಿಳಿಸುವ ಮೂಲಕ ಆ್ಯಪಲ್ ಸಾಕಷ್ಟು ದಯೆ ತೋರಿದೆ ’ ಎಂದು ವ್ಯಂಗ್ಯವಾಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News