ಸ್ಕೂಟರಿನಿಂದ ಬಿದ್ದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ ರಾಹುಲ್ ಗಾಂಧಿ; ವಿಡಿಯೋ ವೈರಲ್
Update: 2023-08-09 14:27 GMT
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಸಂಸತ್ ಗೆ ತೆರಳುತ್ತಿದ್ದಾಗ, ರಸ್ತೆ ಮಧ್ಯೆ ಸ್ಕೂಟರ್‌ನಿಂದ ಬಿದ್ದ ವ್ಯಕ್ತಿಯನ್ನು ಉಪಚರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ರಾಹುಲ್ ಗಾಂಧಿ ಕುಳಿತಿದ್ದ ಕಾರು ಮುಂದೆ ಸಾಗುತ್ತಿರುವಾಗ ಆ ಹೊತ್ತಲ್ಲೇ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದಾರೆ. ಅಪಘಾತಕ್ಕೆ ಒಳಗಾದವರು ಎನ್ನಲಾದ ಇಬ್ಬರು ಪರಸ್ಪರ ಮಾತುಗಳಾಡುತ್ತಿರುವಾಗ ರಾಹುಲ್ ಗಾಂಧಿ ಪರಿಶೀಲಿಸಿದ್ದಾರೆ.
ತಕ್ಷಣವೇ ಅವರ ಅಂಗರಕ್ಷಕರು ಕೂಡಾ ಧಾವಿಸಿದ್ದು, ಅವರೊಂದಿಗೆ ಸ್ಕೂಟರ್ ಎತ್ತಲು ರಾಹುಲ್ ಗಾಂಧಿ ಕೂಡಾ ಸಹಾಯ ಮಾಡಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯ ಮೇಲೆ ಭಾಷಣ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.