ಹರ್ಯಾಣ ಗಲಭೆ: ಐದಕ್ಕೇರಿದ ಸಾವಿನ ಸಂಖ್ಯೆ; ಗುರುಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರ

Update: 2023-08-02 06:38 GMT

Photo: PTI 

ಚಂಡಿಗಢ: ಹರ್ಯಾಣ ನೂಹ್‌ನಲ್ಲಿ ಸೋಮವಾರ ಸಂಜೆ ವಿಶ್ವಹಿಂದೂ ಪರಿಷತ್‌ನ ಶೋಭಾ ಯಾತ್ರೆ ಸಂರ‍್ಭ ದುಷ್ರ‍್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ನಡೆದ ಕೋಮ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರ 5ಕ್ಕೆ ಏರಿಕೆಯಾಗಿದೆ.

ಈ ಐವರಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಇಬ್ಬರು ಸ್ಥಳೀಯರು ಮೃತಪಟ್ಟಿರುವುದು ನೂಹ್‌ನಿಂದ ವರದಿಯಾಗಿದೆ. ಸ್ಥಳೀಯರಲ್ಲಿ ಒಬ್ಬರ ಗುರುತು ಪತ್ತೆಹಚ್ಚಲಾಗಿದೆ. ಇನ್ನೊಬ್ಬರ ಗುರುತು ಇದುವರೆಗೆ ಪತ್ತೆ ಹಚ್ಚಿಲ್ಲ. ಗುರುಗ್ರಾಮದಲ್ಲಿ ದುಷ್ರ‍್ಮಿಗಳ ಗುಂಪೊಂದು ಮಸೀದಿಯ ಇಮಾಮರನ್ನು ಹತ್ಯೆಗೈದಿದೆ.

ಹಿಂಸಾಚಾರ ಪೀಡಿತ ನೂಹ್ ಜಿಲ್ಲೆಯಲ್ಲಿ ರ‍್ಫ್ಯೂ ಜಾರಿಗೊಳಿಸಲಾಗಿದೆ ಎಂದು ರ‍್ಯಾಣ ಗೃಹ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಗರ‍್ಗಿ ಕಕ್ಕರ್‌ಅವರು ಗುರುಗ್ರಾಮದ ಸಿವಿಲ್ ಲೈನ್ಸ್‌ನಲ್ಲಿ ಚಾಲನೆ ನೀಡಿದ್ದ ಶೋಭಾ ಯಾತ್ರೆಗೆ ನೂಹ್‌ನ ಖೇಡ್ಲಾ ಮೋಡ್‌ನಲ್ಲಿ ಗುಂಪೊಂದು ತಡೆ ಒಡ್ಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರ ರ‍್ಯಾಣದ ಇತರ ಜಿಲ್ಲೆಗಳಿಗೂ ಹರಡಲು ಆರಂಭವಾದಾಗ ರ‍್ಯಾಣ ಆಡಳಿತ ನೂಹ್, ಗುರುಗ್ರಾಮ, ರೇವಾರಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಅಲ್ಲದೆ, ಈ ವಲಯಗಳಲ್ಲಿ ಇಂಟರ್‌ನೆಟ್ ಅನ್ನು ಆಗಸ್ಟ್ 2ರ ವರೆಗೆ ರದ್ದುಗೊಳಿಸಿತ್ತು.

ಹಲವು ಅಂಗಡಿಗಳು ಹಾಗೂ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ ಅಥವಾ ಹಾನಿ ಉಂಟು ಮಾಡಲಾಗಿದೆ. ಸೋಹ್ನಾ ಚೌಕ್ ಸಮೀಪದ ಸೋಹ್ನಾದಲ್ಲಿ ಸುಮಾರು ೫೦ ಕಾರುಗಳಿಗೆ ಹಾನಿ ಉಂಟು ಮಾಡಲಾಗಿದೆ. ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಅಥವಾ ಲೂಟಿಗೈಯಲಾಗಿದೆ. ನೂಹ್‌ನಲ್ಲಿ ಕೂಡ ಬುಧವಾರ ಇದೇ ಪರಿಸ್ಥಿತಿ ಕಂಡು ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ಕೇಂದ್ರ ಶಸಸ್ತ್ರ ಪೊಲೀಸ್ ಪಡೆ (ಸಿಎಪಿಎಸ್)ಯ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ.

ಗುರುಗ್ರಾಮದ ಸೆಕ್ಟರ್ 57ರಲ್ಲಿ ಮಂಗಳವಾರ ಮುಂಜಾನೆ ಗುಂಪೊಂದು ಮಸೀದಿಗೆ ಬೆಂಕಿ ಹಚ್ಚಿದೆ ಹಾಗೂ ಅಲ್ಲಿನ ನಯೀಬ್ ಇಮಾಮ್ ಅವರನ್ನು ಹತ್ಯೆಗೈದಿದೆ.

ಮೃತಪಟ್ಟ ನಯೀಬ್ ಇಮಾಮ್ ಅವರನ್ನು 19 ರ‍್ಷ ವಯಸ್ಸಿನ ಸಾದ್ ಎಂದು ಪೊಲೀಸರು ಗುರುತಿಸಿದ್ದಾರೆ.

‘‘ದಾಳಿಕೋರರು ಬಂಧೂಕು, ತಲವಾರು ಹಾಗೂ ಲಾಠಿಗಳನ್ನು ಹಿಡಿದುಕೊಂಡು ಮಧ್ಯರಾತ್ರಿ ಆಗಮಿಸಿದರು’’ ಎಂದು ಮಸೀದಿ ಸಮಿತಿಯ ಸದಸ್ಯ ಮುಹಮ್ಮದ್ ಅಸ್ಲಾಂ ಹೇಳಿದ್ದಾರೆ.

‘‘ತೆರೆದ ಜಾಗದಲ್ಲಿ ನಮಾಝ್ ಮಾಡುವುದಕ್ಕೆ ಸಂಘ ಪರಿವಾರದ ಕರ‍್ಯರ‍್ತರು ೨೦೨೧-೨೨ರಲ್ಲಿ ಅಡ್ಡಿ ಪಡಿಸಿದ್ದರು. ಆದುದರಿಂದ ಗುರುಗಾಂವ್‌ನಲ್ಲಿ ಯಾವುದೇ ಅಡ್ಡಿ, ಆಂತಕ, ಬೆದರಿಕೆ ಇಲ್ಲದೆ ನಮಾಝ್ ಮಾಡಲು ಇರುವ ಏಕೈಕ ಮಸೀದಿ ಇದಾಗಿತ್ತು. ಆದರೆ, ಕೋಮು ಶಕ್ತಿಗಳು ಈ ಮಸೀದಿಗೆ ಕೂಡ ಬೆಂಕಿ ಹಚ್ಚಿವೆ’’ ಎಂದು ನಾಗರಿಕ ವೇದಿಕೆ ಗುರುಗಾಂವ್ ಏಕ್ತಾ ಮಂಚ್‌ನ ಅಲ್ತಾಫ್ ಅಹ್ಮದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News