ಈಡಿ ನಿರ್ದೇಶಕ ಸಂಜಯ್ ಮಿಶ್ರಾಗೆ ನೀಡಲಾದ ಸೇವಾ ವಿಸ್ತರಣೆ ಕಾನೂನು ಬಾಹಿರ, ಅಸಿಂಧು: ಸುಪ್ರೀಂಕೋರ್ಟ್

Update: 2023-07-11 09:37 GMT

ಸಂಜಯ್ ಕುಮಾರ್ ಮಿಶ್ರಾ, ಫೋಟೋ: ANI

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ (ಈಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ನೀಡಿರುವ ಸೇವಾ ವಿಸ್ತರಣೆಯನ್ನು ಕಾನೂನು ಬಾಹಿರ  ಹಾಗೂ ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಆದರೆ ನ್ಯಾಯಾಲಯವು ಜುಲೈ 31ರವರೆಗೆ ಮಿಶ್ರಾಗೆ ಹುದ್ದೆಯಲ್ಲಿ ಮುಂದುವರಿಸಲು ಅವಕಾಶ ನೀಡಿದೆ.

ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ನಿವೃತ್ತ ಅಧಿಕಾರಿಯ ಅಧಿಕಾರಾವಧಿಯನ್ನು ವಿಸ್ತರಿಸಬಹುದು ಎಂಬ 2021 ರ ತೀರ್ಪನ್ನು ಮರುಪರಿಶೀಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮೇನಲ್ಲಿ ಹೇಳಿತ್ತು.

2021 ರಲ್ಲಿ  ಜಾರಿ ನಿರ್ದೇಶನಾಲಯದ (ಈಡಿ ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಹುದ್ದೆಯಲ್ಲಿ ಮುಂದುವರಿಕೆ ವಿರುದ್ಧ ನ್ಯಾಯಾಲಯವು ಈ ಆದೇಶವನ್ನು ನೀಡಿತ್ತು.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News