ಆರ್‌ಟಿಇ ಕಾಯ್ದೆ ಅನುಸರಿಸದ ಮದರಸಾಗಳನ್ನು ಮುಚ್ಚುವ NCPCR ಆದೇಶ ಪಾಲಿಸದಂತೆ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ಬಂಧ
ಹೊಸದಿಲ್ಲಿ: ಆರ್ ಟಿಇ ಕಾಯ್ದೆ ಅನುಸರಿಸದ ಮದರಸಾಗಳ ಮಾನ್ಯತೆ ಹಿಂಪಡೆಯುವಂತೆ ಸೂಚಿಸಿದ ಎನ್ಸಿಪಿಸಿಆರ್(NCPCR) ಆದೇಶ ಪತ್ರವನ್ನು ಪಾಲನೆ ಮಾಡದಂತೆ ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.
ಶಿಕ್ಷಣ ಹಕ್ಕುಗಳ ಕಾಯ್ದೆ (RTE Act) ಅನುಸರಿಸದ ಮದರಸಾಗಳ ಮಾನ್ಯತೆಯನ್ನು ಹಿಂಪಡೆಯುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಹೊರಡಿಸಿದ ಪತ್ರವನ್ನು ಕೇಂದ್ರ ಅಥವಾ ರಾಜ್ಯ ಸರಕಾರಗಳು ಪಾಲನೆ ಮಾಡದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
NCPCR ಕ್ರಮವನ್ನು ಪ್ರಶ್ನಿಸಿ ಜಮಿಯತ್ ಉಲೇಮಾ-ಐ-ಹಿಂದ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಕೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.
2024ರ ಜೂ. 7ರಂದು NCPCR ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು RTE ಕಾಯಿದೆಯನ್ನು ಅನುಸರಿಸದ ಮದರಸಾಗಳ ಮಾನ್ಯತೆಯನ್ನು ಹಿಂಪಡೆಯುವಂತೆ ನಿರ್ದೇಶಿಸಿತ್ತು.