ಉತ್ತಮ ವಾಯು ಗುಣಮುಟ್ಟ ಹೊಂದಿರುವ ನಗರಗಳಲ್ಲಿ ಸೂರತ್ ಗೆ ಅಗ್ರ ಸ್ಥಾನ!

Update: 2024-09-08 07:05 GMT

 ಸೂರತ್‌ ನಗರದ ನೋಟ  | PC : X/@indexofSurat

ಹೊಸದಿಲ್ಲಿ : ಉತ್ತಮ ವಾಯು ಗುಣಮುಟ್ಟ ಹೊಂದಿರುವ ಭಾರತದ ನಗರಗಳಲ್ಲಿ ಸೂರತ್ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದು, ಜಬಲ್ಪುರ ಮತ್ತು ಆಗ್ರಾ ನಂತರದ ಸ್ಥಾನಗಳಲ್ಲಿದೆ.

ʼನೀಲಿ ಆಕಾಶಕ್ಕಾಗಿ ಶುದ್ಧ ವಾಯುವಿನ ಅಂತಾರಾಷ್ಟ್ರೀಯ ದಿನʼ(International Day of Clean Air for Blue Skies)ದ ಅಂಗವಾಗಿ ಆಯೋಜಿಸಲಾದ ʼಸ್ವಚ್ಛ ವಾಯು ಸರ್ವೇಕ್ಷಣ 2024ʼ ರಾಷ್ಟ್ರೀಯ ಕಾರ್ಯಾಗಾರದ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವಾಲಯವು "ರಾಷ್ಟ್ರೀಯ ಕ್ಲೀನ್ ಏರ್ ಸಿಟಿ" ಪ್ರಶಸ್ತಿಗಳನ್ನು ನೀಡಿದೆ.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಸೂರತ್, ಜಬಲ್ಪುರ ಮತ್ತು ಆಗ್ರಾ ಮೊದಲ 3 ಸ್ಥಾನಗಳಲ್ಲಿದೆ. 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಉತ್ತರಪ್ರದೇಶದ ಫಿರೋಝಾಬಾದ್, ಮಹಾರಾಷ್ಟ್ರದ ಅಮರಾವತಿ ಮತ್ತು ಉತ್ತರಪ್ರದೇಶದ ಝಾನ್ಸಿ ಅತ್ಯುತ್ತಮ ನಗರಗಳೆಂದು ಗುರುತಿಸಲ್ಪಟ್ಟಿದೆ.

ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಉತ್ತರಪ್ರದೇಶದ ರಾಯ್ಬರೇಲಿ, ತೆಲಂಗಾಣದ ನಲ್ಗೊಂಡ ಮತ್ತು ಹಿಮಾಚಲ ಪ್ರದೇಶದ ನಲಗಢ ಅಗ್ರಸ್ಥಾನದಲ್ಲಿವೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ವಿವಿಧ ಕಾರ್ಯತಂತ್ರಗಳನ್ನು ಈ ನಗರಗಳು ಅಳವಡಿಸಿಕೊಂಡಿದೆ. ಪಾದಚಾರಿ ಮಾರ್ಗ, ಉತ್ತಮ ರಸ್ತೆಗಳು, ತ್ಯಾಜ್ಯದ ಜೈವಿಕ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಗ್ರೀನ್‌ಬೆಲ್ಟ್ ಅಭಿವೃದ್ಧಿ, ಉತ್ತಮ ಸಂಚಾರ ನಿರ್ವಹಣಾ ವ್ಯವಸ್ಥೆಗಳು ಸೇರಿದಂತೆ ವಿವಿಧ ಕ್ರಮಗಳನ್ನು ಅಳವಡಿಸಿಕೊಂಡಿರುವುದರಿಂದ ಈ ನಗರಗಳ ವಾಯು ಗುಣಮಟ್ಟ ಉತ್ತಮವಾಗಿದ್ದು ಅವುಗಳಿಗೆ ಅಗ್ರ ಶ್ರೇಯಾಂಕವನ್ನು ನೀಡಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News