ತಮಿಳುನಾಡು | ಲಂಚಪ್ರಕರಣದಲ್ಲಿ ಬಂಧಿತನಾಗಿದ್ದ ಈಡಿ ಅಧಿಕಾರಿಗೆ ಜಾಮೀನು, ಬಿಡುಗಡೆ
ಹೊಸದಿಲ್ಲಿ : ಲಂಚ ಪ್ರಕರಣದಲ್ಲಿ ತಮಿಳುನಾಡು ಭ್ರಷ್ಟಾಚಾರ ವಿರೋಧಿ ದಳದಿಂದ ಬಂಧಿತರನಾಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಅಂಕಿತ್ ತಿವಾರಿ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
ಆದರೆ ಸುಪ್ರೀಂಕೋರ್ಟ್ ನ ಪೂರ್ವಾನುಮತಿಯಿಲ್ಲದೆ ತಮಿಳುನಾಡು ತೊರೆಯದಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ತಿವಾರಿಗೆ ಆದೇಶಿಸಿದೆ.
ಸಾಕ್ಷಿದಾರರ ಮೇಲೆ ಪ್ರಭಾವ ಬೀರಲು ಯತ್ನಿಸದಂತೆ ಆರೋಪಿ ಈಡಿ ಅಧಿಕಾರಿಯನ್ನು ತಡೆಯಬೇಕೆಂಬ ತಮಿಳುನಾಡು ಸರಕಾರ ಪರ ವಕೀಲರಾದ ಕಪಿಲ್ ಸಿಬಲ್, ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್, ಹರಿಯ ಅಡ್ವೋಕೇಟ್ ಅಮಿತ್ ಆನಂದ್ ತಿವಾರಿ ಅವರ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತು ಹಾಗೂ ಪ್ರಕರಣದ ಮುಂದಿನ ಆಲಿಕೆಯನ್ನು ಎಪ್ರಿಲ್ 18ಕ್ಕೆ ನಿಗದಿಪಡಿಸಿತು.
ತಮಿಳುನಾಡಿನ ದಿಂಡಿಗುಲ್ಜಿಲ್ಲೆಯಲ್ಲಿ ವೈದ್ಯರೊಬ್ಬರಿಂದ 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ತಿವಾರಿ ಅವರು ಭ್ರಷ್ಟಾಚಾ ವಿರೋಧಿ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.