ಬಿಜೆಪಿ ಸರ್ಕಾರದ ಪದಚ್ಯುತಿಯೇ ಅತ್ಯಂತ ಶ್ರೇಷ್ಠ ದೇಶಭಕ್ತಿ: ಕೇಜ್ರಿವಾಲ್

Update: 2023-10-23 02:41 GMT

Photo: facebook.com/AAPkaArvind 

ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿಯನ್ನು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪದಚ್ಯುತಗೊಳಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕರೆ ನೀಡಿದ್ದಾರೆ. ಇದು ದೇಶದ ಅಭಿವೃದ್ಧಿಯ ಅಡೆತಡೆಗಳನ್ನು ನಿವಾರಿಸುವ ಹಾಗೂ ದೇಶಭಕ್ತಿಯ ಅತಿದೊಡ್ಡ ಕ್ರಮವಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಸೂತ್ರ ಹಿಡಿದ ಬಿಜೆಪಿ ಇನ್ನಷ್ಟು ಹೆಚ್ಚು ಪ್ರಗತಿ ಸಾಧಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಎರಡೂ ಚುನಾವಣೆಗಳಲ್ಲಿ ಜನ ಬಿಜೆಪಿಯನ್ನು ಅತಿದೊಡ್ಡ ಬಹುಮತದೊಂದಿಗೆ ಆಶೀರ್ವದಿಸಿದ್ದಾರೆ. ಅವರು ಬಯಸಿದ್ದರೆ, ಈ ಅವಧಿಯಲ್ಲಿ ಅವರು ಹೆಚ್ಚಿನದನ್ನು ಸಾಧಿಸಲು ಮತ್ತು ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸಲು ಅವಕಾಶವಿತ್ತು. ಆದರೆ ದೇಶದಲ್ಲಿ ಅವರ ಆಡಳಿತದಿಂದಾಗಿ ಇಂದು ಪರಿಸ್ಥಿತಿ ಹೇಗೆ ಚಂಚಲವಾಗಿದೆ ಎನ್ನುವುದನ್ನು ನಾವು ನೋಡಬಹುದು" ಎಂದು ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

"ಬಿಜೆಪಿಯನ್ನು ಪದಚ್ಯುತಗೊಳಿಸುವುದು 2024ರಲ್ಲಿ ಅತಿದೊಡ್ಡ ದೇಶಪ್ರೇಮದ ಕ್ರಮವಾಗಲಿದೆ. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕೆಲ ನಿರ್ದಿಷ್ಟ ನಿರ್ಧಾರಗಳನ್ನು ಅವರು ಕೈಗೊಳ್ಳಲು ಏನು ಕಾರಣ ಎನ್ನುವುದು ಅರ್ಥವಾಗುತ್ತಿಲ್ಲ. ಈ ನಿರ್ಧಾರಗಳನ್ನು ಅವರು ಮಾಡಿದ್ದಾರೆಯೇ ಅಥವಾ ಬೇರೆಯವರು ಮಾಡಿದ್ದಾರೆಯೇ ಎಂಬ ಅಚ್ಚರಿ ಮೂಡುತ್ತದೆ" ಎಂದು ಅಭಿಪ್ರಾಯಪಟ್ಟರು.

ತಮ್ಮ ಪಕ್ಷದ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ ಅವರು, ತಾವೂ ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಜನಸಾಮಾನ್ಯರ ಪ್ರತಿನಿಧಿಗಳು ಎಂದರು. ಬೇರೆ ಪಕ್ಷಗಳ ಮುಖಂಡರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಜನರನ್ನು ಶೋಷಿಸಿದರೆ, ನಮ್ಮ ಪಕ್ಷದ ಮುಖಂಡರು ನಿಜವಾಗಿ ಆಮ್ ಆದ್ಮಿಗಳು ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News