ಸೊರೇನ್ ವಿರುದ್ಧ ಸಾಕ್ಷ್ಯಕ್ಕೆ ಟಿವಿ, ಫ್ರಿಡ್ಜ್ ಖರೀದಿ ಬಿಲ್ ಬಳಸಿದ ಈಡಿ!

Update: 2024-04-07 08:37 GMT

ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಬಂಧಿತರಾಗಿರುವ ಜೆಎಂಎಂ ಪಕ್ಷದ ನಾಯಕ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು 31 ಕೋಟಿ ರೂ.ಗೂ ಹೆಚ್ಚು ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು ಎಂಬುದನ್ನು ಸಮರ್ಥಿಸಲು ಜಾರಿ ನಿರ್ದೇಶನಾಲಯ (ಈಡಿ) ಸಾಕ್ಷ್ಯಾಧಾರಗಳಲ್ಲಿ ಫ್ರಿಡ್ಜ್, ಸ್ಮಾರ್ಟ್ ಟಿ.ವಿ ಖರೀದಿಯ ಬಿಲ್ ಬಳಸಿದೆ ಎಂದು ಎಂದು ತಿಳಿದು ಬಂದಿದೆ.

ರಾಂಚಿಯ ವಿಶೇಷ ನ್ಯಾಯಾಯಲದಲ್ಲಿ ಈಡಿ ಸಲ್ಲಿಸಿರುವ 191 ಪುಟಗಳ ಚಾರ್ಜ್ ಶೀಟ್‌ನಲ್ಲಿ ಹೇಮಂತ್ ಸೊರೇನ್, ರಾಜ್‌ಕುಮಾರ್ ಪಹಾನ್, ಹಿಲರಿಯಾಸ್, ಭಾನು ಪ್ರತಾಪ್ ಪ್ರಸಾದ್ ಮತ್ತು ಬಿನೋದ್ ಸಿಂಗ್ ಆರೋಪಿಗಳು ಎಂದು ಉಲ್ಲೇಖಿಸಿದೆ. ಅಲ್ಲದೆ, ಈ ಎರಡು ಬಿಲ್‌ಗಳನ್ನು ರಾಂಚಿ ಮೂಲಕ ಇಬ್ಬರು ಡೀಲರ್‌ಗಳಿಂದ ಜಾರಿ ನಿರ್ದೇಶನಾಲಯ (ಈಡಿ) ತೆಗೆದುಕೊಂಡಿದ್ದು, ಇದನ್ನು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ ಶೀಟ್‌ನಲ್ಲಿ ಲಗತ್ತಿಸಿದೆ.

ಭೂ ಹಗರಣ ಪ್ರಕರಣ ಸಂಬಂಧ ಜ.3ರಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಈಡಿ ಬಂಧಿಸಿತ್ತು.ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News