ವೋಟ್‌ ಜಿಹಾದ್‌ ಮಾಡುವಂತೆ ಮುಸ್ಲಿಮರಿಗೆ ʼಇಂಡಿʼ ಒಕ್ಕೂಟ ಕರೆ : ಪ್ರಧಾನಿ ಮೋದಿ

Update: 2024-05-02 11:07 GMT

ನರೇಂದ್ರ ಮೋದಿ | PC : ANI

ಅಹ್ಮದಾಬಾದ್ : "ವೋಟ್‌ ಜಿಹಾದ್‌ ಮಾಡುವಂತೆ ಮುಸ್ಲಿಮರಿಗೆ ʼಇಂಡಿʼ ಒಕ್ಕೂಟ ಕರೆ ನೀಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ದ್ವೇಷ ಭಾಷಣ ಮಾಡಿದ್ದಾರೆ.

ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, “ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ನಂತೆ ಇದೀಗ ವೋಟ್‌ ಜಿಹಾದ್‌ ಪ್ರಾರಂಭಿಸಲಿದ್ದಾರೆ. ಎಲ್ಲಾ ಮುಸ್ಲಿಮರು ಒಗ್ಗಟ್ಟಾಗಿ ವೋಟ್ ಜಿಹಾದ್ ಮಾಡುವಂತೆ ಹೇಳಲಾಗಿದೆ. ವಿರೋಧ ಪಕ್ಷಗಳ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

“ಲವ್ ಜಿಹಾದ್ ಬಗ್ಗೆ ಕೇಳಿದ್ದೆವು, ಲ್ಯಾಂಡ್‌ ಜಿಹಾದ್‌ ಬಗ್ಗೆ ಕೇಳಿದ್ದೆವು. ಈಗ ವೋಟ್ ಜಿಹಾದ್ ಕೇಳುತ್ತಿದ್ದೇವೆ. ಸಾಮಾನ್ಯ ಮದ್ರಸಾದಿಂದ ಹೊರಬಂದ ಮಕ್ಕಳು ಇದನ್ನು ಹೇಳಿದ್ದಲ್ಲ. ಕಾಂಗ್ರೆಸ್‌ನ ಉನ್ನತ ಸ್ಥಾನದಲ್ಲಿರುವ ಅತ್ಯಂತ ಸುಶಿಕ್ಷಿತ ಕುಟುಂಬದಿಂದ ಈ ಮಾತು ಕೇಳಿಬಂದಿದೆ” ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ.

“ವೋಟ್ ಜಿಹಾದಿನ ಮಾತುಗಳನ್ನು ಆಡುವ ಮೂಲಕ ಇಂಡಿ ಮೈತ್ರಿಕೂಟವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಪಮಾನ ಮಾಡಿದೆ. ಈವರೆಗೆ ಕಾಂಗ್ರೆಸ್‌ನ ಒಬ್ಬನೇ ಒಬ್ಬ ನಾಯಕ ಇದುವರೆಗೆ ಇದನ್ನು ವಿರೋಧಿಸಿಲ್ಲ. ಮೌನ ಸಮ್ಮತಿ ನೀಡಿದ್ದಾರೆ. ವೋಟ್ ಜಿಹಾದ್‌ನ ಮಾತುಗಳು ಕಾಂಗ್ರೆಸ್‌ನ ತುಷ್ಟೀಕರಣ ನೀತಿಯನ್ನು ಮುಂದುವರಿಸಿದೆ” ಎಂದು ಪ್ರಧಾನಿ ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News