ಮಹಿಳಾ ಮೀಸಲಾತಿ ಮಸೂದೆ: ಮೋದಿ ಸರ್ಕಾರ 10 ವರ್ಷ ಕಾದಿದ್ದು ಏಕೆ; ಕಪಿಲ್ ಸಿಬಲ್ ಪ್ರಶ್ನೆ
Update: 2023-09-19 07:09 GMT
ಹೊಸದಿಲ್ಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬಹುದು ಎಂಬ ವದಂತಿಗಳ ನಡುವೆಯೇ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಮಸೂದೆ ಮಂಡಿಸಲು ಸುಮಾರು 10 ವರ್ಷಗಳ ಕಾಲ ಏಕೆ ಕಾದರು ಎಂದು ಪ್ರಶ್ನಿಸಿದ್ದಾರೆ. ಬಹುಶಃ 2024 ರ ಸಾರ್ವತ್ರಿಕ ಚುನಾವಣೆಗಾಗಿ ಅವರು ಕಾದಿರಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೋಮವಾರ ಮಹಿಳಾ ಮೀಸಲಾತಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಕ್ಯಾಬಿನೆಟ್ ಮಸೂದೆಗೆ ಅನುಮೋದನೆ ನೀಡಿದೆ ಎಂದು ಹೇಳಿದ್ದರು. ಆದರೆ ಅದಾಗಿ ಒಂದು ಗಂಟೆಯೊಳಗೆ ಪೋಸ್ಟ್ ಅನ್ನು ಅಳಿಸಲಾಗಿದೆ.
ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಏನಾಯಿತು ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ, ಆದರೂ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ ಎಂಬ ಊಹಾಪೋಹಗಳು ಹರಡಿವೆ.