ನ್ಯೂಝಿಲ್ಯಾಂಡ್ ಗೆ 99 ರನ್ ಗಳ ಜಯ
ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 6 ನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ 99 ರನ್ ಗಳಿಂದ ಗೆದ್ದಿದೆ
ಗಾಯದ ಕಾರಣ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ ತಂಡ ನಿಗದಿತ 50 ಒವರ್ ಗಳಲ್ಲಿ ನಾಯಕ ಸಹಿತ ಇಬ್ಬರು ಬ್ಯಾಟರ್ ಗಳ ಆಕರ್ಷಕ ಅರ್ಧಶತಕ ದ ನೆರವಿನಿಂದ 322 ರನ್ ಪೇರಿಸಿತ್ತು.
ಈ ಸ್ಪರ್ಧಾತ್ಮಕ ಕಠಿಣ ಗುರಿ ಬೆನ್ನುಹತ್ತಿದ ನೆದರ್ ಲ್ಯಾಂಡ್ ಉತ್ತಮ ಆರಂಭ ನೀಡಲಿಲ್ಲ. ವಿಕ್ರಮಜಿತ್ ಸಿಂಗ್ 12 ರನ್ ಗಳಿಸಿ ಮಾಟ್ ಹೆನ್ರಿ ಗೆ ವಿಕೆಟ್ ಒಪ್ಪಿಸಿದರೆ, ಮಾಕ್ಸ್ ಒʼಡೌಟ್ 16 ರನ್ ಗೆ ಮಿಚೆಲ್ ಸಾಂಟ್ನರ್ ಗೆ ವಿಕೆಟ್ ನೀಡಿ ಇನ್ನಿಂಗ್ಸ್ ಮುಗಿಸಿದರು. ಬಾಸ್ ಡೆ ಲೀಡೆ 18 ರನ್ ಗಳಿಸಿ ಪವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ನೆದರ್ ಲ್ಯಾಂಡ್ ಪರ ಅತ್ಯಧಿಕ ರನ್ ಬಾರಿಸಿದ್ದ ಕಾಲಿನ್ ಆಕೆರ್ಮಾನ್ 5 ಬೌಂಡರಿ ಸಹಿತ 69 ಗಲಿಸಿರುವಾಗ 32.5 ಒವರ್ ಮಿಚೆಲ್ ಸಾಂಟ್ನರ್ ಬೌಲಿಂಗ್ ನಲ್ಲಿ ಮಾಟ್ ಹೆನ್ರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ನಂತರ ಬಂದ ಯಾವೊಬ್ಬ ಬ್ಯಾಟರ್ ಕೂಡ ನ್ಯೂಝಿಲ್ಯಾಂಡ್ ಬೌಲರ್ ವಿರುದ್ಧ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಂತು ತಂಡವನ್ನು ಗೆಲ್ಲಿಸಲು ಸಾದ್ಯವಾಗಲಿಲ್ಲ. ತಾಜಾ ನಿದಮನ್ರು 21 ರನ್ ಗಳಿಸಿದರೆ ವಿಕೆಟ್ ಕೀಪರ್ ಸ್ಕಾಟ್ ಎಡ್ವರ್ಡ್ಸ್ 30 ಬಾರಿಸಿದರು. ಅಂತಿಮವಾಗಿ ನೆದರ್ ಲ್ಯಾಂಡ್ ವಿಕೆಟ್ ಪತನ ಕಾಣುತ್ತಾ223 ರನ್ ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡತು. ನ್ಯೂಝಿಲ್ಯಾಂಡ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಪಿನ್ನರ್ ಮಿಚೆಲ್ ಸಾಂಟ್ನರ್ 5 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಮಾಟ್ ಹೆನ್ರಿ 3 ವಿಕೆಟ್, ರಚಿನ್ ರವೀಂದ್ರ ಒಂದು ವಿಕೆಟ್ ಪಡೆದರು.
ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಮಾಡಿದ ನ್ಯೂಝಿಲ್ಯಾಂಡ್ ಏಳು ವಿಕೆಟ್ ನಷ್ಟಕ್ಕೆ 322 ಬಾರಿಸಿತ್ತು. ನ್ಯೂಝಿಲ್ಯಾಂಡ್ ಆರಂಭಿಕ ಬ್ಯಾಟರ್ ಗಳಾದ ಡೆವೋನ್ ಕಾನ್ವೆ ಹಾಗೂ ವಿಲ್ ಯಂಗ್ ಉತ್ತಮ ಆರಂಭ ನೀಡಿದರು. ವಿಲ್ ಯಂಗ್( 70 ) ರಚಿನ್ ರವೀಂದ್ರ (51) ನಾಯಕ ಟಾಮ್ ಲಾಥಮ್ 53 ಗಳಿಸಿದರೆ, ಡೆರಲ್ ಮಿಚೆಲ್ 48 ರನ್ ಬಾರಿಸಿದ್ದರು. ಕೊನೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಾಂಟ್ನರ್ 17 ಬಾಲ್ ಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ ಅಜೀಯ 36 ರನ್ ಸಿಡಿಸಿದರು.
ನೆದರ್ ಲ್ಯಾಂಡ್ ಪರ ವಾನ್ ಡರ್ ಮರ್ವೆ , ಪೌಲ್ ವಾನ್ ಮೀಕೆರನ್ ಹಾಗೂ ಆರ್ಯನ್ ದತ್ ತಲಾ 2 ವಿಕೆಟ್ ಪಡೆದರೆ, ಬಾಸ್ ಡೇ ಲೀಡೆ 1 ವಿಕೆಟ್ ಕಬಳಿಸಿದ್ದರು.
ಮಿಚೆಲ್ ಸಾಂಟ್ನರ್ ಗೆ 5 ವಿಕೆಟ್ : ಸ್ಪಿನ್ನರ್ ಮಿಚೆಲ್ ಸಾಂಟ್ನರ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಮೊದಲ ಐದು ವಿಕೆಟ್ ಪಡೆದು ವಿಶಿಷ್ಟ ಸಾಧನೆ ಮಾಡಿದರು.
ನೆದರ್ ಲ್ಯಾಂಡ್ ವಿರುದ್ಧ ತಮ್ಮ ಸ್ಪಿನ್ ಕೈಚಳಕ ತೋರಿಸಿದ ಸಾಂಟ್ನರ್ ಪ್ರಮುಖ ಐದು ವಿಕೆಟ್ ಕಬಳಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಸ್ಯಾಂಟ್ನರ್, ಮ್ಯಾಕ್ಸ್ ಒ'ಡೌಡ್, ಕಾಲಿನ್ ಆಕೆರ್ಮಾನ್ , ಸ್ಕಾಟ್ ಎಡ್ವರ್ಡ್ಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ರಿಯಾನ್ ಕ್ಲೈನ್ ಅವರನ್ನು ಔಟ್ ಮಾಡಿ ಐದು ವಿಕೆಟ್ ಗಳಿಕೆಯನ್ನು ಪೂರ್ಣಗೊಳಿಸಿದರು