ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು

Update: 2023-06-28 13:43 GMT

ಲಕ್ನೋ: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬುಧವಾರ ಭೀಮ್ ಆರ್ಮಿ ಮತ್ತು ಆಝಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಅವರ ಬೆಂಗಾವಲು ಪಡೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯಿಂದಆಝಾದ್ ಅವರ ಸೊಂಟಕ್ಕೆ ಗುಂಡು ತಗುಲಿದ್ದು, ಅವರನ್ನು ದೇವಬಂದ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಚಂದ್ರಶೇಖರ್ ಆಝಾದ್  ಅವರ ಬೆಂಗಾವಲು ವಾಹನದ ಮೇಲೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಆಝಾದ್ ಅವರಿಗೆ ತಗುಲಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ ಡಾ ವಿಪಿನ್ ತಾಡಾ ತಿಳಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ದಾಳಿ ನಡೆದಾಗ ಕಾರಿನೊಳಗೆ ತನ್ನ ಕಿರಿಯ ಸಹೋದರ ಸೇರಿದಂತೆ ಐವರು ಇದ್ದೆವು. ನನಗೆ ಚೆನ್ನಾಗಿ ನೆನಪಿಲ್ಲ ಆದರೆ ನನ್ನೊಂದಿಗೆ ಇದ್ದವರು ಅವರನ್ನು ಗುರುತಿಸಿದ್ದಾರೆ. ಅವರ ಕಾರು ಸಹರಾನ್‌ಪುರದ ಕಡೆಗೆ ಹೊರಟಿತು. ನಾವು ಯು-ಟರ್ನ್ ತೆಗೆದುಕೊಂಡೆವು ಎಂದು ಗಾಯಾಳು ಆಝಾದ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News