ಜಪಾನ್ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಇಂಜಿನ್ ಸ್ಫೋಟ

Update: 2023-07-14 16:53 GMT

ಸಾಂದರ್ಭಿಕ ಚಿತ್ರ | Photo : Twitter

ಟೋಕಿಯೊ: ಜಪಾನ್ ಬಾಹ್ಯಾಕಾಶ ಏಜೆನ್ಸಿಯ ರಾಕೆಟ್ ಇಂಜಿನ್ ಶುಕ್ರವಾರ ಟೆಸ್ಟಿಂಗ್ ಸಂದರ್ಭ ಸ್ಫೋಟಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಯೊಡೊ ಸುದ್ಧಿಸಂಸ್ಥೆ ವರದಿ ಮಾಡಿದೆ.

ಸ್ಫೋಟದಲ್ಲಿ ಯಾವುದೇ ಹಾನಿಯಾಗಿಲ್ಲ, ಆದರೆ ದೇಶದ ಮಹಾತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗೆ ಹಿನ್ನಡೆಯಾಗಿದೆ ಎಂದು ಜಪಾನ್‌ನ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಅಕಿಟಾ ಪ್ರಾಂತದಲ್ಲಿನ ನೊಷಿರೊ ಟೆಸ್ಟಿಂಗ್ ಸೆಂಟರ್‌ನಲ್ಲಿ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ ನಡೆಸಿದ ಎಪ್ಸಿಲಾನ್ ಎಸ್ ರಾಕೆಟ್‌ನ ಎರಡನೇ ಹಂತದ ಇಂಜಿನ್‌ನ ನೆಲಹಂತದ ಪರೀಕ್ಷೆಯ ಸಂದರ್ಭ ಇಂಜಿನ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಟ್ಟಡದ ಛಾವಣಿ ಹಾಗೂ ಒಂದು ಬದಿಯ ಗೋಡೆಗೆ ಹಾನಿಯಾಗಿದೆ. ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News