ಜನಗಣತಿಗಾಗಿ ಜನಾಂದೋಲನ ರೂಪುಗೊಳ್ಳಲಿ

Update: 2024-07-02 03:39 GMT

ಮಾನ್ಯರೇ,

2021ರಲ್ಲಿ ನಡೆಸಬೇಕಿದ್ದ ಜನಗಣತಿಯನ್ನು ಮೂರು ವರ್ಷಗಳ ನಂತರವೂ ನಡೆಸುತ್ತಿಲ್ಲ. 2026ರಲ್ಲಿ ವಿಧಾನಸಭಾ, ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡನೆಯನ್ನು ನಿಗದಿಪಡಿಸಲಾಗಿದೆ.

ಆದರೆ Delimitation Act, 2002ನ ಪ್ರಕಾರ 2026ರ ನಂತರ ನಡೆಸುವ ಜನಗಣತಿ ನಂತರವಷ್ಟೇ ಕ್ಷೇತ್ರ ಪುನರ್ವಿಂಗಡಣೆ ಮಾಡಬೇಕು ಎಂದು ಹೇಳಿದೆ.

ಅಂದರೆ 2021ರಲ್ಲಿ ಜನಗಣತಿ ನಡೆಸಿದ್ದರೆ ಮತ್ತೆ 2031ರಲ್ಲಿ ಜನಗಣತಿ ನಡೆಸಬೇಕಿತ್ತು. ಆ ನಂತರವಷ್ಟೇ ಕ್ಷೇತ್ರಗಳ ಪುನರ್ವಿಂಗಡನೆ ಆಯೋಜಿಸಬೇಕಿತ್ತು.

ಈ ಕಾರಣದಿಂದಾಗಿ ಕ್ಷೇತ್ರಗಳ ಪುನರ್ವಿಂಗಡನೆಯಿಂದ ಉತ್ತರ ಭಾರತದಲ್ಲಿ cow belt ರೂಪುಗೊಳ್ಳುವ ಹೆಚ್ಚುವರಿ ಕ್ಷೇತ್ರಗಳು 2029ರ ಲೋಕಸಭಾ ಚುನಾವಣೆಯ ಹೊತ್ತಿಗೆ ದೊರಕುವುದಿಲ್ಲ. ಇಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿ ತನಗೆ ನಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿದೆ. ಹೀಗಾಗಿ 2021ರಲ್ಲಿ ನಡೆಸದೆ 2027ರ ಹೊತ್ತಿಗೆ ಜನಗಣತಿ ನಡೆಸಿ, ನಂತರ ಕ್ಷೇತ್ರಗಳ ಪುನರ್ವಿಂಗಡನೆ ನಡೆಸಿ 2029ರ ಚುನಾವಣೆಯಲ್ಲಿ ಭರಪೂರ ಲಾಭ ಪಡೆಯಬಹುದೆಂದು ಬಿಜೆಪಿಯ ತಂತ್ರವಿದೆ.

ಆದರೆ ಜನಗಣತಿಯನ್ನು ಆರು ವರ್ಷಗಳ ಮುಂದೂಡುವಿಕೆಯಿಂದ ಅಂದಾಜು 10 ಕೋಟಿ ಜನಸಂಖ್ಯೆ ಸರಕಾರದ ಕಲ್ಯಾಣ ಯೋಜನೆಗಳಿಂದ, ಪಡಿತರ ವ್ಯವಸ್ಥೆಯಿಂದ ವಂಚಿತರಾಗುತ್ತಾರೆ. ಇದು ಘೋರ ಅನ್ಯಾಯವಾಗಿದೆ.

‘ಇಂಡಿಯಾ’ ಒಕ್ಕೂಟ, ನಾಗರಿಕ ಸಮಾಜ ಈ ಕುರಿತು ಮಾತನಾಡಬೇಕಲ್ಲವೇ? ಜನಾಂದೋಲನ ರೂಪಿಸಬೇಕಲ್ಲವೇ?

- ಬಿ. ಶ್ರೀಪಾದ ಭಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News