ರಾಯಚೂರು | ಹೆಲ್ಮೆಟ್ ಕಡ್ಡಾಯ ಆದೇಶ ಹಿಂಪಡೆದು ರಸ್ತೆ ಸುಧಾರಣೆಗೆ ಆದ್ಯತೆ ನೀಡಿ : ಕೆ.ರಾಜೇಶ ಕುಮಾರ
ರಾಯಚೂರು : ಪೊಲೀಸರು ಏಕಾಏಕಿ ಹೆಲ್ಮೆಟ್ ಧರಿಸದ ಸಾವರರಿಗೆ ದಂಡ ಹಾಕುತ್ತಿರುವುದು ಖಂಡನೀಯ. 2 ತಿಂಗಳ ಕಾಲ ದಂಡ ಹಾಕುವುದನ್ನು ಕೈಬಿಟ್ಟು ಸಿಸಿ ಕ್ಯಾಮೆರಾ, ಸಿಗ್ನಲ್ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ರಾಜೇಶ ಕುಮಾರ ತಿಳಿಸಿದ್ದಾರೆ.
ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಈ ಹಿಂದೆ ಹೆಲ್ಮೆಟ್ ಕಡ್ಡಾಯ ಆದೇಶ ಮಾಡಿದರೂ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಮಾಡಿಲ್ಲ. ಜಿಲ್ಲೆಯಲ್ಲಿ ಗುಣಮಟ್ಟದ ರಸ್ತೆಯಿಲ್ಲ, ಸಿಗ್ನಲ್, ಸಿಸಿ ಕ್ಯಾಮೆರಾ ಇಲ್ಲ. ಇದನ್ನು ಮೊದಲು ಅಳವಡಿಸಿ ರಸ್ತೆ ಸುರಕ್ಷತೆ ಕೈಗೊಳ್ಳಬೇಕು. ಬಳಿಕ ಹೆಲ್ಮೆಟ್ ಧರಿಸದವರಿಗೆ ದಂಡ ಹಾಕಲಿ. ಆದರೆ ಇದೆಲ್ಲವನ್ನು ಮರೆಮಾಚಿ ಬೈಕ್ ಸವಾರರಿಗೆ 500 ರೂ. ಯಿಂದ 1000 ರೂ. ದಂಡ ಹಾಕುತ್ತಿರುವುದು ಸರಿಯಲ್ಲ. 2 ದಿನಗಳ ಒಳಗೆ ಪರಿಶೀಲನೆ ಮಾಡಿ ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ವಿದ್ಯಾರ್ಥಿಗಳ ಜೊತೆಗೂಡಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರದ ಹಲವೆಡೆ ಗುಣಮಟ್ಟ ವಲ್ಲದ ಕಳಪೆ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸವಾರರ ಸುರಕ್ಷತೆ ಇಲ್ಲದಂತಾಗಿದೆ. ಎಸ್ಪಿ ಅವರು ಕೂಡಲೇ ಪರಿಶೀಲನೆ ನಡೆಸಿ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರಾಜು, ಅಗಸ್ಟೀನ್, ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.