'ಪಿಂಕ್ ವಾಟ್ಸ್ ಆ್ಯಪ್' ಬಳಕೆ ಅಪಾಯಕಾರಿ: ಪೊಲೀಸ್ ಇಲಾಖೆ ಎಚ್ಚರಿಕೆ
Update: 2024-01-24 06:47 GMT
ಬೆಂಗಳೂರು, ಜ.24: 'ಪಿಂಕ್ ವಾಟ್ಸ್ ಆ್ಯಪ್' (Pink WhatsApp) ವ್ಯಾಮೋಹಕ್ಕೆ ಒಳಗಾಗಿ ಸೈಬರ್ ವಂಚನೆಗೆ ಒಳಗಾಗಬೇಡಿ ಎಂದು ಕರ್ನಾಟಕ ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ 'X'ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಪೊಲೀಸ್, "ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ, ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ.." ಎಂಬ ಸಂದೇಶ ನೀಡಿದೆ.
ಒಂದು ವೇಳೆ ನೀವು ಗುಲಾಬಿ Pink WhatsApp ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿದರೆ ಫೋನ್ ನಲ್ಲಿರುವ ಫೋಟೊ, ಸೇವ್ ಆಗಿರುವ ಫೋನ್ ನಂಬರ್ ಗಳು, ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್, ಎಸ್ಸೆಮ್ಮೆಸ್ ಹ್ಯಾಕ್ ಆಗಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.