ಮಹಿಳೆಯರ ಸಿಂಗಲ್ಸ್ | ಡೊನ್ನಾ ವೆಕಿಕ್ ಸೆಮಿ ಫೈನಲ್‌ಗೆ ಲಗ್ಗೆ

Update: 2024-07-09 17:07 GMT

ಲಂಡನ್ : ವಿಂಬಲ್ಡನ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್‌ನ ಲುಲು ಸನ್ ಅವರ ಅಮೋಘ ಪ್ರದರ್ಶನವು ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯವಾಗಿದೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಅಂತಿಮ-8ರ ಪಂದ್ಯದಲ್ಲಿ ಕ್ರೊಯೇಶಿಯದ ಡೊನ್ನಾ ವೆಕಿಕ್ ಅವರು ಕಿವೀಸ್‌ನ ಕ್ವಾಲಿಫೈಯರ್ ಸನ್‌ರನ್ನು 5-7, 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ಗೆಲುವಿನ ಮೂಲಕ ಸೆಮಿ ಫೈನಲ್‌ಗೆ ಪ್ರವೇಶಿಸಿರುವ ವೆಕಿಕ್ ವೈಯಕ್ತಿಕ ಮೈಲಿಗಲ್ಲು ತಲುಪಿದರು. ವಿಂಬಲ್ಡನ್‌ನಲ್ಲಿ ಈ ಸಾಧನೆ ಮಾಡಿದ ಕ್ರೊಯೇಶಿಯದ 2ನೇ ಆಟಗಾರ್ತಿ ಎನಿಸಿಕೊಂಡರು. 1999ರಲ್ಲಿ ಮಿರ್ಜಾನಾ ಲುಸಿಕ್ ಈ ಸಾಧನೆ ಮಾಡಿದ್ದರು.

25 ವರ್ಷಗಳ ನಂತರ ವಿಂಬಲ್ಡನ್ ಸೆಮಿ ಫೈನಲ್ ತಲುಪಿದ ಮೊದಲ ಮಹಿಳಾ ಕ್ವಾಲಿಫೈಯರ್ ಆಗಬೇಕೆಂಬ ಸನ್ ಕನಸು ಕೈಗೂಡಲಿಲ್ಲ. ಅಮೆರಿಕದ ಅಲೆಕ್ಸಾಂಡ್ರಾ ಸ್ಟೀವನ್‌ಸನ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News