ಜೆಲೆನಾ ಒಸ್ಟಾಪೆಂಕೊ ಅಂತಿಮ-8ರ ಘಟ್ಟಕ್ಕೆ ಪ್ರವೇಶ

Update: 2024-07-09 17:07 GMT

ಹೊಸದಿಲ್ಲಿ: ಯೂಲಿಯಾ ಪುಟಿಂಟ್ಸೇವಾರನ್ನು 6-2, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿರುವ 2017ರ ಫ್ರೆಂಚ್ ಓ ಪನ್ ವಿನ್ನರ್ ಜೆಲೆನಾ ಒಸ್ಟಾಪೆಂಕೊ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.

ರಶ್ಯ ಸಂಜಾತೆ ಪುಟಿಂಟ್ಸೇವಾ ಅವರು ಪ್ರಸಕ್ತ ಟೂರ್ನಮೆಂಟ್ನಲ್ಲಿ ರವಿವಾರ ನಡೆದಿದ್ದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ವಿಶ್ವ್ವದ ನಂ. 1 ಆಟಗಾರ್ತಿ ಇಗಾ ಸ್ವಿಯಾಟೆಕ್ರನ್ನು ಸೋಲಿಸಿ ಗಮನ ಸೆಳೆದಿದ್ದರು.

ಪಂದ್ಯದುದ್ದಕ್ಕ್ಕೂ ಲಾಟ್ವಿಯದ 27ರ ಹರೆಯದ ಒಸ್ಟಾಪೆಂಕೊ ಅವರು ಪುಟಿಂಟ್ಸೇವಾರ ಸರ್ವ್ ಅನ್ನು ಐದು ಬಾರಿ ತುಂಡರಿಸಿದರು. ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪುಟಿಂಟ್ಸೇವಾ 26 ಅನಗತ್ಯ ತಪ್ಪೆಸಗಿದರು.

2018ರಲ್ಲಿ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದ 13ನೇ ಶ್ರೇಯಾಂಕದ ಜೆಲೆನಾ ಒಸ್ಟಾಪೆಂಕೊ ಮುಂದಿನ ಸುತ್ತಿನಲ್ಲಿ ಅಮೆರಿಕದ ಡ್ಯಾನಿಲ್ ಕಾಲಿನ್ಸ್ ಅಥವಾ ಝೆಕ್ ಗಣರಾಜ್ಯದ ಬಾರ್ಬೊರ ಕ್ರೆಜ್ಸಿಕೋವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News