ಡಿಸೆಂಬರ್ 2ರಿಂದ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆರಂಭ

Update: 2023-08-17 18:16 GMT

ProKabaddi | Photo: twitter \ @ProKabaddi

ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್ ನ(PKL) 10ನೇ ಆವೃತಿಯ ಟೂರ್ನಿಯು 2023ರ ಡಿಸೆಂಬರ್ 2ರಂದು ಆರಂಭವಾಗಲಿದ್ದು, ಲೀಗ್ ಅನ್ನು 12 ನಗರಗಳಲ್ಲಿ ಆಡಲಾಗುವುದು.

ಮುಂಬರುವ ಋತುವಿನ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ, ಲೀಗ್ ನ ಹತ್ತನೇ ಆವೃತ್ತಿಯನ್ನು ಸ್ಮರಣೀಯವಾಗಿಸಲಾಗುವುದು ಎಂದು ಭರವಸೆ ನೀಡಿದರು.

10ನೇ ಆವೃತ್ತಿಯ ಲೀಗ್ಗೆ ಹರಾಜು ಪ್ರಕ್ರಿಯೆಯು ಸೆಪ್ಟಂಬರ್ 8 ಹಾಗೂ 9ರಂದು ಮುಂಬೈನಲ್ಲಿ ನಡೆಯಲಿದೆ.

ಪ್ರತಿ ತಂಡವು 9ನೇ ಆವೃತ್ತಿಯ ಪಿಕೆಎಲ್ ನ ತನ್ನ ತಂಡದಲ್ಲಿ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು.

ಪವನ್ ಕುಮಾರ್ ಸೆಹ್ರಾವತ್ ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದು, 9ನೇ ಆವೃತ್ತಿಯ ಪಿಕೆಎಲ್ನಲ್ಲಿ ತಮಿಳ್ ತಲೈವಾಸ್ ತಂಡ 2.26 ಕೋ. ರೂ.ಗೆ ಪವನ್ರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಪವನ್ ಋತುವಿನ ಮೊದಲ ಪಂದ್ಯದಲ್ಲೇ ಗಾಯಗೊಂಡರು. ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News