2024ರ ಟಿ20 ವಿಶ್ವಕಪ್ ಜೂನ್ನಲ್ಲಿ ಕೆರಿಬಿಯನ್ ದ್ವೀಪ, ಅಮೆರಿಕದಲ್ಲಿ

Update: 2023-07-29 18:09 GMT

Photo : ಟಿ20 ವಿಶ್ವಕಪ್ | twitter

ದುಬೈ : 2024ರ ಪುರುಷರ ಟಿ20 ವಿಶ್ವಕಪ್ನ ಪಂದ್ಯಗಳು ಹೊಸ ಮಾದರಿಯಲ್ಲಿ ಕೆರಿಬಿಯನ್ ದ್ವೀಪಗಳು ಮತ್ತು ಅಮೆರಿಕದಲ್ಲಿ ಜೂನ್ 4ರಿಂದ 30ರವರೆಗೆ ನಡೆಯುವ ಸಾಧ್ಯತೆಗಳಿವೆ ಎಂದು ‘ಇಎಸ್ಪಿಎನ್ಕ್ರಿಕ್ಇನ್ಫೊ.ಕಾಮ್’ ವರದಿ ಮಾಡಿದೆ.

ಪಂದ್ಯಗಳು ನಡೆಯುವ ಅಮೆರಿಕದ ಕ್ರೀಡಾಂಗಣಗಳಲ್ಲಿ ಫ್ಲೋರಿಡದ ಲಾಡರ್ಹಿಲ್ ಮೈದಾನವೂ ಒಂದು ಎಂದು ವರದಿ ತಿಳಿಸಿದೆ. ಇದೇ ಮೈದಾನದಲ್ಲಿ ಭಾರತದ ಪ್ರಸಕ್ತ ವೆಸ್ಟ್ ಇಂಡೀಸ್ ಪ್ರವಾಸದ ನಾಲ್ಕು ಮತ್ತು ಐದನೇ ಟಿ20 ಪಂದ್ಯಗಳು ನಡೆಯಲಿವೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕಿರುಪಟ್ಟಿಯಲ್ಲಿ ಈ ಮೈದಾನ ಸೇರ್ಪಡೆಯಾಗಿದ್ದು ಪರಿಶೀಲನೆಯಲ್ಲಿದೆ ಎಂದು ವರದಿ ತಿಳಿಸಿದೆ.

ಆದರೆ, ಮೈದಾನಗಳ ಅಂತಿಮ ಪಟ್ಟಿಯ ಕುರಿತ ನಿರ್ಧಾರವನ್ನು ಐಸಿಸಿ, ಯುಎಸ್ಎ ಕ್ರಿಕೆಟ್ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ಗಳು ಜಂಟಿಯಾಗಿ ತೆಗೆದುಕೊಳ್ಳಲಿವೆ.

ಈಗಿನ ಮಟ್ಟಿಗೆ, ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ನ ಆರಂಭಿಕ ಋತುವಿನ ಪಂದ್ಯಗಳನ್ನು ಮೋರಿಸ್ವಿಲ್ನ ಚರ್ಚ್ ಸ್ಟ್ರೀಟ್ ಪಾರ್ಕ್ ಮತ್ತು ಡಲ್ಲಾಸ್ನ ಗ್ರಾಂಡ್ ಪ್ರಯರೀ ಸ್ಟೇಡಿಯಮ್- ಈ ಎರಡು ಮೈದಾನಗಳಲ್ಲಿ ಆಡಲಾಗುತ್ತಿದೆ. ಆದರೆ, ಈ ಎರಡೂ ಮೈದಾನಗಳಿಗೆ ಅಂತರ್ರಾಷ್ಟ್ರೀಯ ಕ್ರೀಡಾಂಗಣ ಎಂಬ ಸ್ಥಾನಮಾನ ಇನ್ನೂ ಲಭಿಸಿಲ್ಲ.

2024ರ ಟಿ20 ವಿಶ್ವಕಪ್ನಲ್ಲಿ 20 ತಂಡಗಳು ಪಾಲ್ಗೊಳ್ಳಲಿವೆ ಹಾಗೂ ಅವುಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗುವುದು ಎಂಬುದಾಗಿಯೂ ವರದಿ ತಿಳಿಸಿದೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ‘ಸೂಪರ್ 8’ ಹಂತಕ್ಕೆ ಹೋಗುತ್ತವೆ. ಸೂಪರ್ 8ರ ಹಂತದಲ್ಲಿ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇರುತ್ತವೆ. ಆ ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್ ತಲುಪುತ್ತವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News