ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಏಕದಿನ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಅಫ್ಘಾನಿಸ್ತಾನ

Update: 2024-09-21 07:18 GMT

Photo credit: X/@ACBofficials

ಶಾರ್ಜಾ: ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದ ಎರಡನೆ ಏಕದಿನ ಪಂದ್ಯದಲ್ಲಿ 177 ರನ್ ಗಳ ಬೃಹತ್ ಅಂತರದ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡ ಅಫ್ಘನ್ನರು, ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಆರು ವಿಕೆಟ್ ಗಳ ಸುಲಭ ಗೆಲುವು ದಾಖಲಿಸಿತ್ತು.

ಅಫ್ಘಾನಿಸ್ತಾನ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ 105 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನ ತಂಡ ಸವಾಲಿನ 311 ರನ್ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಶತಕದ ಮೂಲಕ ಅಫ್ಘಾನಿಸ್ತಾನ ಬ್ಯಾಟರ್ ಒಬ್ಬರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಒಟ್ಟು ಏಳು ಶತಕ ಗಳಿಸಿದ ಪ್ರಥಮ ಬ್ಯಾಟರ್ ಎಂಬ ಹಿರಿಮೆಗೆ ರಹಮಾನುಲ್ಲಾ ಗುರ್ಬಾಝ್ ಭಾಜನರಾದರು.

ನಂತರ ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ತಂಡವು, ರಶೀದ್ ಖಾನ್ ದಾಳಿಗೆ ತತ್ತರಿಸಿ ಕೇವಲ 134 ರನ್ ಗೆ ಆಲೌಟ್ ಆಯಿತು. 26ನೇ ಜನ್ಮದಿನ ಆಚರಿಸಿಕೊಂಡ ರಶೀದ್ ಖಾನ್, ಕೇವಲ 19 ರನ್ ನೀಡಿ 5 ವಿಕೆಟ್ ಗಳನ್ನು ಕಿತ್ತರು. ಮತ್ತೊಬ್ಬ ಬೌಲರ್ ನಂಗೇಯಲಿಯ ಖರೋಟೆ 26 ರನ್ ನೀಡಿ 4 ವಿಕೆಟ್ ಕಿತ್ತರು. ಆ ಮೂಲಕ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪ್ರಪ್ರಥಮ ಸರಣಿ ವಿಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ರವಿವಾರ ನಡೆಯಲಿರುವ ಮೂರನೆಯ ಪಂದ್ಯ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News