ಪ್ಯಾರಿಸ್ ಒಲಿಂಪಿಕ್ಸ್ | ಲಿಂಗ ವಿವಾದದ ನಡುವೆಯೆ ಚಿನ್ನ ಜಯಿಸಿದ ಅಲ್ಜೀರಿಯ ಬಾಕ್ಸರ್ ಇಮಾನ್ ಖಲೀಫ್

Update: 2024-08-10 07:41 GMT

ಇಮಾನ್ ಖಲೀಫ್ (Photo: PTI)

ಪ್ಯಾರಿಸ್: ತಮ್ಮ ಸುತ್ತ ಸುತ್ತಿಕೊಂಡಿದ್ದ ಲಿಂಗ ವಿವಾದದ ಹೊರತಾಗಿಯೂ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್, 66 ಕೆಜಿ ವಿಭಾಗದ ಮಹಿಳಾ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಚೀನಾದ ಯಾಂಗ್ ಲಿಯು ಅವರನ್ನು 5-0 ಅಂಕಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 

25 ವರ್ಷದ ಇಮಾನ್ ಖಲೀಫ್, ತಮ್ಮ ಈ ಕನಸನ್ನು ನನಸಾಗಿಸಿಕೊಳ್ಳಲು ಕಳೆದ ಎಂಟು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.

ಈ ಪಂದ್ಯದಲ್ಲಿ ಇಮಾನ್ ಖಲೀಫ್ ಗೆಲುವು ಸಾಧಿಸಿದ ನಂತರ, ತಂಡದ ಸದಸ್ಯರು ಆಕೆಯನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ನಡೆಸಿದರು. ಇದು ಅಲ್ಜೀರಿಯಾ ಪಾಲಿಗೆ ಎರಡನೆ ಚಿನ್ನದ ಪದಕವಾಗಿದೆ.

ಪಂದ್ಯ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖಲೀಫ್, “ನನಗೆ ತುಂಬಾ ಸಂತಸವಾಗಿದೆ. ಕಳೆದ ಎಂಟು ವರ್ಷಗಳಿಂದ ಇದು ನನ್ನ ಕನಸಾಗಿತ್ತು. ನಾನೀಗ ಒಲಿಂಪಿಕ್ಸ್ ಚಾಂಪಿಯನ್ ಆಗಿದ್ದು, ಚಿನ್ನದ ಪದಕ ಜಯಿಸಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಈ ಪಯಣವು ಕಠಿಣ ಪರಿಶ್ರಲಮ ಹಾಗೂ ಅರ್ಪಣಾ ಮನೋಭಾವದಿಂದ ಕೂಡಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News