ಹ್ಯಾಂಗ್‌ಝೌನಲ್ಲಿ ವರ್ಣರಂಜಿತ ಸಮಾರಂಭದಲ್ಲಿ ಏಶ್ಯನ್ ಗೇಮ್ಸ್ ಗೆ ಚಾಲನೆ

Update: 2023-09-23 14:04 GMT

Photo: PTI 

ಹ್ಯಾಂಗ್‌ಝೌ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶನಿವಾರ ಹ್ಯಾಂಗ್‌ಝೌನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಏಷ್ಯನ್ ಗೇಮ್ಸ್‌ಗೆ ಚಾಲನೆ ನೀಡಿದರು.

ಚೀನಾದಲ್ಲಿ ಕೋವಿಡ್‌ ಕಾರಣಕ್ಕೆ ಒಂದು ವರ್ಷ ವಿಳಂಬವಾಗಿ ಏಶ್ಯನ್‌ ಗೇಮ್ಸ್‌ ನಡೆಯುತ್ತಿದೆ. ಏಷ್ಯಾ ಮತ್ತು ಮಧ್ಯಪ್ರಾಚ್ಯದ 45 ರಾಷ್ಟ್ರಗಳಿಂದ 12,000 ಕ್ಕೂ ಹೆಚ್ಚು ಸ್ಪರ್ಧಿಗಳು 40 ಕ್ರೀಡೆಗಳಲ್ಲಿ ಸ್ಪರ್ಧಿಸಲು ಹ್ಯಾಂಗ್‌ಝೌ ಗೆ ಆಗಮಿಸಿದ್ದಾರೆ.

ಭಾರತದ 655 ಸದಸ್ಯರ ತಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ಇದು ಸ್ಪರ್ಧೆಯ ಇತಿಹಾಸದಲ್ಲಿ ಒಂದು ದೇಶದ ಅತಿದೊಡ್ಡ ತಂಡವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಭಾರತೀಯ ತಂಡವನ್ನು ಮುನ್ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News