ಏಶ್ಯನ್ ಗೇಮ್ಸ್: ಮಹಿಳಾ ಹಾಕಿ ತಂಡದ ಸಂಭಾವ್ಯರ ಪಟ್ಟಿಯಿಂದ ರಾಣಿ ರಾಂಪಾಲ್ ಹೊರಕ್ಕೆ

Update: 2023-08-12 18:06 GMT

 Rani Rampal : PTI 

ಹೊಸದಿಲ್ಲಿ: ಹಿರಿಯ ಫಾರ್ವರ್ಡ್ ಆಟಗಾರ್ತಿ ರಾಣಿ ರಾಂಪಾಲ್ ರನ್ನು ಸೆಪ್ಟಂಬರ್-ಅಕ್ಟೋಬರ್ ನಲ್ಲಿ ಚೀನಾದಲ್ಲಿ ನಡೆಯುವ ಹಾಂಗ್ಝೌ ಏಶ್ಯನ್ ಗೇಮ್ಸ್ ತಯಾರಿಗಾಗಿ ನಡೆಯಲಿರುವ ರಾಷ್ಟ್ರೀಯ ಶಿಬಿರಕ್ಕಾಗಿ ಆಯ್ಕೆ ಮಾಡಲಾಗಿರುವ 34 ಸದಸ್ಯೆಯರನ್ನು ಒಳಗೊಂಡ ಭಾರತ ಹಿರಿಯರ ಮಹಿಳಾ ಹಾಕಿ ಸಂಭಾವ್ಯ ತಂಡದಿಂದ ಹೊರಗಿಡಲಾಗಿದೆ.

ತಾನು ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ತನ್ನನ್ನು ಏಕೆ ಹೊರಗಿಡಲಾಗಿದೆ ಎಂದು ತಿಳಿದುಕೊಳ್ಳಲು ಬಯಸಿದ್ದೇನೆ ಎಂದು ರಾಷ್ಟ್ರೀಯ ಮುಖ್ಯ ಕೋಚ್ ಜನ್ನೆಕ್ ಶಾಪ್ಮನ್ ವಿರುದ್ಧ ರಾಂಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಇತ್ತೀಚೆಗಿನ ಸ್ಪರ್ಧಾವಳಿಗಳಲ್ಲಿ ತಂಡವಾಗಿ ಬೆಳೆಯುತ್ತಿದ್ದೇವೆ ಹಾಗೂ ನಿರಂತರವಾಗಿ ಕಲಿಯುತ್ತಿದ್ದೇವೆ. ಮುಂಬರುವ ಶಿಬಿರವು ನಮಗೆ ಅತ್ಯಂತ ಮುಖ್ಯವಾಗಿದೆ. ನಾವು ಏಶ್ಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿದ್ದೇವೆ ಎಂದು ಶಾಪ್ಮನ್ ಹೇಳಿದ್ದಾರೆ.

ಶಿಬಿರವು ರವಿವಾರ ಆರಂಭವಾಗಲಿದ್ದು, ಸೆಪ್ಟಂಬರ್ 18ರಂದು ಮುಕ್ತಾಯವಾಗಲಿದೆ.

ಭಾರತವು ಸೆಪ್ಟಂಬರ್ 27ರಂದು ಏಶ್ಯನ್ ಗೇಮ್ಸ್ ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಎ ಗುಂಪಿನಲ್ಲಿ ಕೊರಿಯಾ, ಮಲೇಶ್ಯ, ಹಾಂಕಾಂಗ್, ಚೀನಾ ಹಾಗೂ ಸಿಂಗಾಪುರ ತಂಡಗಳೊಂದಿಗೆ ಭಾರತ ಸ್ಥಾನ ಪಡೆದಿದೆ.

ಭಾರತದ ಮಹಿಳಾ ತಂಡ ಕಳೆದ ತಿಂಗಳು ಬಾರ್ಸಿಲೋನದಲ್ಲಿ 100ನೇ ವರ್ಷದ ಸ್ಪ್ಯಾನಿಶ್ ಹಾಕಿ ಫೆಡರೇಶನ್ ಇಂಟರ್ನ್ಯಾಶನಲ್ ಟೂರ್ನಮೆಂಟನ್ನು ಜಯಿಸಿತ್ತು.

ಸಂಭಾವ್ಯರು

ಗೋಲ್ ಕೀಪರ್ ಗಳು: ಸವಿತಾ, ರಜನಿ ಎಟಿಮುರ್ಪು, ಬಿಚು ದೇವಿ, ಬನ್ಸಾರಿ ಸೋಲಂಕಿ.

ಡಿಫೆಂಡರ್ ಗಳು: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ, ಜ್ಯೋತಿ ಚತ್ರಿ, ಮಹಿಮಾ ಚೌಧರಿ.

ಮಿಡ್ಫೀಲ್ಡರ್ ಗಳು: ನಿಶಾ, ಸಲಿಮಾ ಟೇಟೆ, ಸುಶೀಲಾ ಚಾನು, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಮರಿಯನಾ ಕುಜುರ್, ಸೋನಿಕಾ, ನೇಹಾ, ಬಲ್ಜೀತ್ ಕೌರ್, ರೀನಾ ಖೋಕರ್, ವೈಷ್ಣವಿ ವಿಠಲ್ ಫಾಲ್ಕೆ, ಅಜ್ಮಿನಾ ಕುಜುರ್.

ಫಾರ್ವರ್ಡ್ ಗಳು: ಲಾಲ್ರೆಂಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಝ್ ಖಾನ್, ಸುನೀತಾ ಟೊಪ್ಪೊ, ಬ್ಯೂಟಿ ಡಂಗ್ಡಂಗ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News