ಏಶ್ಯನ್ ಗೇಮ್ಸ್| ಮಹಿಳಾ ಹಾಕಿ: ಸಿಂಗಾಪುರ ವಿರುದ್ಧ ಭಾರತಕ್ಕೆ 13-0 ಅಂತರದ ಭರ್ಜರಿ ಜಯ

Update: 2023-09-27 17:27 GMT

Photo : Hockey India

ಹಾಂಗ್ಝೂ: ಚೀನಾದ ಹಾಂಗ್ಝೂನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನ ಮಹಿಳಾ ಹಾಕಿ ಎ ಬಣದ ಪಂದ್ಯವೊಂದರಲ್ಲಿ ಬುಧವಾರ ಭಾರತವು ಸಂಗೀತಾ ಕುಮಾರಿಯ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಸಿಂಗಾಪುರವನ್ನು 13-0 ಭರ್ಜರಿ ಅಂತರದಿಂದ ಸೋಲಿಸಿದೆ.

ಭಾರತೀಯ ಆಟಗಾರ್ತಿಯರು ಮೊದಲ ಎರಡು ಕ್ವಾರ್ಟರ್ಗಳಲ್ಲಿ 8 ಗೋಲುಗಳನ್ನು ದಾಖಲಿಸಿದರು. ದ್ವಿತೀಯಾರ್ಧದಲ್ಲಿ ಭಾರತೀಯರಿಗೆ ಕೊಂಚ ಪ್ರತಿರೋಧ ತೋರಿಸಲು ಸಿಂಗಾಪುರದ ಆಟಗಾರ್ತಿಯರಿಗೆ ಸಾಧ್ಯವಾಯಿತು. ಆ ಅವಧಿಯಲ್ಲಿ 5 ಗೋಲುಗಳು ಬಂದವು.

ಸಂಗೀತಾ 23, 47 ಮತ್ತು 56ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ನವನೀತ್ ಕೌರ್ 14ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ದಾಖಲಿಸಿದರು. ಉದಿತಾ (6ನೇ ನಿಮಿಷ), ಸುಶೀಲಾ ಚಾನು (8ನೇ ನಿಮಿಷ), ದೀಪಿಕಾ (11ನೇ ನಿಮಿಷ), ದೀಪ್ ಗ್ರೇಸ್ ಎಕ್ಕಾ (17ನೇ ನಿಮಿಷ), ನೇಹಾ (19ನೇ ನಿಮಿಷ), ಸಲೀಮಾ ಟೇಟೆ (35ನೇ ನಿಮಿಷ), ಮೋನಿಕಾ (52ನೇ ನಿಮಿಷ) ಮತ್ತು ವಂದನಾ ಕಟಾರಿಯ (56ನೇ ನಿಮಿಷ)ದಲ್ಲಿ ಗೋಲುಗಳನ್ನು ಬಾರಿಸಿದರು.

ಶುಕ್ರವಾರ ನಡೆಯಲಿರುವ ತನ್ನ ಬಣದ ಇನ್ನೊಂದು ಪಂದ್ಯದಲ್ಲಿ ಭಾರತವು ಮಲೇಶ್ಯವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News