ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ: ಪಿಸಿಬಿ ಮುಖ್ಯಸ್ಥರನ್ನು ಭೇಟಿಯಾಗಲಿರುವ ಬಾಬರ್ ಅಝಮ್

Update: 2023-11-13 18:24 GMT

Photo : cricketworldcup.com

ಲಾಹೋರ್: ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ತಂಡದ ನಾಯಕ ಬಾಬರ್ ಅಝಮ್ ಸೋಮವಾರ ಲಾಹೋರ್ ತಲುಪಿದ್ದಾರೆ.

ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಅವರು ಸ್ವಯಂಪ್ರೇರಿತವಾಗಿ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿಲ್ಲ ಎಂದು ವರದಿಗಳು ಹೇಳಿವೆ. ಬದಲಿಗೆ, ಈ ವಿಷಯದಲ್ಲಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ನಿರ್ಧಾರಕ್ಕಾಗಿ ಕಾಯಲಿದ್ದಾರೆ.

ಅವರನ್ನು ಅವರ ಕುಟುಂಬ ಸದಸ್ಯರು ಲಾಹೋರ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಅವರು ಈ ವಾರ ಪಿಸಿಬಿ ಮುಖ್ಯಸ್ಥ ಝಾಕ ಅಶ್ರಫ್ರನ್ನು ಭೇಟಿಯಾಗಲಿದ್ದಾರೆ ಎಂದು ವರದಿಗಳು ಹೇಳಿವೆ. ಈ ಭೇಟಿಯ ಬಳಿಕ, ಎಲ್ಲಾ ಮೂರು ಮಾದರಿಗಳ ಕ್ರಿಕೆಟ್ ತಂಡದ ನಾಯಕನಾಗಿ ಮುಂದುವರಿಯುವ ಬಗ್ಗೆ ಅವರು ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

1992ರ ವಿಶ್ವಕಪ್ ಚಾಂಪಿಯನ್ ಆಗಿರುವ ಪಾಕಿಸ್ತಾನ ಹಾಲಿ ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಸೆಮಿಫೈನಲ್ ತಲುಪಲು ಅದಕ್ಕೆ ಸಾಧ್ಯವಾಗಿಲ್ಲ. ಅದು ತನ್ನ ಒಂಭತ್ತು ಲೀಗ್ ಪಂದ್ಯಗಳ ಪೈಕಿ ಐದರಲ್ಲಿ ಸೋಲು ಕಂಡಿದೆ.

ವಿಶ್ವಕಪ್ ನಲ್ಲಿ ಕಳಪೆ ನಿರ್ವಹಣೆಯ ಹಿನ್ನೆಲೆಯಲ್ಲಿ, ಬಾಬರ್ ನಾಯಕತ್ವವನ್ನು ತ್ಯಜಿಸಬೇಕೇ ಅಥವಾ ನಾಯಕನಾಗಿಯೇ ಮುಂದುವರಿಯಬೇಕೇ ಎಂಬ ಬಗ್ಗೆ ಪಾಕಿಸ್ತಾನದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಜನರು ಈ ಬಗ್ಗೆ ಭಿನ್ನ ನಿಲುವುಗಳನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News