ಆಸ್ಟ್ರೇಲಿಯನ್ ಓಪನ್‌ ನಿಂದ ಹಿಂದೆ ಸರಿದ ಬಾರ್ಬೊರಾ ಕ್ರೆಜ್ಸಿಕೋವ

Update: 2025-01-05 17:19 GMT

ಬಾರ್ಬೊರಾ ಕ್ರೆಜ್ಸಿಕೋವ PC: X@BKrejcikova

ಮೆಲ್ಬರ್ನ್: ಬೆನ್ನು ನೋವಿನ ಹಿನ್ನೆಲೆಯಲ್ಲಿ ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಿಂದ ತಾನು ಹಿಂದೆ ಸರಿಯುತ್ತಿದ್ದೇನೆ ಎಂದು ಹಾಲಿ ವಿಂಬಲ್ಡನ್ ಚಾಂಪಿಯನ್ ಝೆಕ್ ದೇಶದ ಬಾರ್ಬೊರಾ ಕ್ರೆಜ್ಸಿಕೋವ ರವಿವಾರ ಹೇಳಿದ್ದಾರೆ.

‘‘ದುರದೃಷ್ಟವಶಾತ್, ಕಳೆದ ಋತುವಿನ ಕೊನೆಯಲ್ಲಿ ನನ್ನನ್ನು ಕಾಡಿದ ಬೆನ್ನು ನೋವು ಇನ್ನೂ ಸಂಪೂರ್ಣವಾಗಿ ವಾಸಿಯಾಗಿಲ್ಲ’’ ಎಂದು 10ನೇ ವಿಶ್ವ ರ್ಯಾಂಕಿಂಗ್‌ ನ ಬಾರ್ಬೊರಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.

‘‘ಇದು ನಿರಾಶೆಯ ಸಂಗತಿಯಾಗಿದೆ. ಯಾಕೆಂದರೆ ಮೆಲ್ಬರ್ನ್‌ ನಲ್ಲಿ ಆಡುವುದನ್ನು ನಾನು ಬಯಸುತ್ತೇನೆ. ಕಳೆದ ವರ್ಷ ಅಲ್ಲಿ ನಾನು ಕ್ವಾರ್ಟರ್‌ಫೈನಲ್ ತಲುಪಿದ್ದೇನೆ. ಆ ಸಿಹಿ ನೆನಪುಗಳು ನನ್ನಲ್ಲಿ ಇವೆ’’ ಎಂದು ಅವರು ಹೇಳಿದ್ದಾರೆ.

‘‘ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಕ್ಕಾಗಿ ನಾನು ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಟೆನಿಸ್ ಅಂಗಣದಲ್ಲಿ ಅತ್ಯಂತ ಶೀಘ್ರವಾಗಿ ನಿಮ್ಮನ್ನು ನೋಡುವ ದಿನಗಗಳಿಗಾಗಿ ನಾನು ಕಾತರಿಸುತ್ತಿದ್ದೇನೆ’’ ಎಂದು ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಬರೆದ ಸಂದೇಶದಲ್ಲಿ 29 ವರ್ಷದ ಕ್ರೆಜ್ಸಿಕೋವ ಹೇಳಿದ್ದಾರೆ.

ಫ್ರೆಂಚ್ ಓಪನ್ ಟ್ರೋಫಿ ಗೆದ್ದ ಮೂರು ವರ್ಷಗಳ ಬಳಿಕ, ಕಳೆದ ವರ್ಷ ಕ್ರೆಜ್ಸಿಕೋವ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News