ಶೀಘ್ರದಲ್ಲೇ ಐಪಿಎಲ್ ಶೈಲಿಯ ಟೈರ್-2 ಲೀಗ್ ಪರಿಚಯಿಸಲಿದೆ ಬಿಸಿಸಿಐ

Update: 2023-12-15 16:09 GMT

BCCI | Photo: PTI 

ಹೊಸದಿಲ್ಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಶೀಘ್ರದಲ್ಲೇ ಟೈರ್-2 ಕ್ರಿಕೆಟ್ ಲೀಗ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಅದರ ನೀಲನಕ್ಷೆ ಈಗಾಗಲೇ ಪ್ರಗತಿಯಲ್ಲಿದ್ದು, ಬಹುಶಃ ಅದು ಟಿ-10 ಸ್ವರೂಪದಲ್ಲಿರಲಿದೆ.

ಮುಂದಿನ ವರ್ಷದ ಸೆಪ್ಟಂಬರ್-ಅಕ್ಟೋಬರ್ನಲ್ಲಿ ಲೀಗ್ ನಡೆಯುವ ಸಾಧ್ಯತೆಯಿದೆ. ಈ ಲೀಗನ್ನು ವಿವಿಧ ಪಾಲುದಾರರು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂದು ಮನಿಕಂಟ್ರೋಲ್.ಕಾಂ ವರದಿ ಮಾಡಿದೆ.

ಟಿ-10 ಸ್ವರೂಪವನ್ನು ಪರಿಚಯಿಸಬೇಕೇ ಅಥವಾ ಟಿ-20 ಆವೃತ್ತಿಯ ಅಡಿಯಲ್ಲಿ ಗ್ರೀನ್ ಸಿಗ್ನಲ್ ನೀಡಬೇಕೇ ಹಾಗೂ ಟೈರ್-2 ಲೀಗ್ಗೆ ವಯಸ್ಸಿನ ಮಿತಿಯನ್ನು ಪರಿಚಯಿಸಬೇಕೇ ಎಂಬ ವಿವಾದದ ಅಂಶವನ್ನು ಬಿಸಿಸಿಐ ಎದುರಿಸುತ್ತಿದೆ ಎಂದು ವರದಿ ತಿಳಿಸಿದೆ.

ಆದರೆ ಬಿಸಿಸಿಐ ಸದ್ಯಕ್ಕೆ ಮುಂಬರುವ ಐಪಿಎಲ್ ಹರಾಜಿನ ಮೇಲೆ ತನ್ನ ಗಮನ ಕೇಂದ್ರೀಕರಸಿದೆ. ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News