ಚೀನಾ ಓಪನ್ | ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಮಾಳವಿಕಾ

Update: 2024-09-21 15:49 GMT

ಮಾಳವಿಕಾ |  PTI

ನಾಗ್ಪುರ : ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಾಳವಿಕಾ ಬಾನ್ಸೋಡ್ ಅವರ ಮಹತ್ವದ ಪಯಣವು ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯಗೊಂಡಿದೆ.

ನಾಗ್ಪುರದ ಭರವಸೆಯ ಶಟ್ಲರ್ ಶುಕ್ರವಾರ ನಡೆದ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ವಿರುದ್ಧ ಸೋತಿದ್ದರು.

ಜಪಾನ್‌ನ 4ನೇ ಶ್ರೇಯಾಂಕದ ಎದುರಾಳಿಯ ವಿರುದ್ಧ ಮಾಳವಿಕಾ ಸಕಾರಾತ್ಮಕ ಆರಂಭ ಪಡೆದಿದ್ದರೂ ಅದೇ ತೀವ್ರತೆ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಮಾಳವಿಕಾ ಮೊದಲ ಗೇಮ್ ಅನ್ನು 10-21 ಅಂತರದಿಂದ ಸೋತರು.

ದೃತಿಗೆಡದ ಮಾಳವಿಕಾ 2ನೇ ಗೇಮ್ಸ್‌ನಲ್ಲಿ ಪ್ರತಿರೋಧ ಒಡ್ಡಿದರು. ಸತತ 4 ಪಾಯಿಂಟ್ಸ್ ಪಡೆದಿರುವ ಮಾಳವಿಕಾ ಸ್ಕೋರನ್ನು 15-19ಕ್ಕೆ ಇಳಿಸಿದರು. ಆದರೆ ಯಮಗುಚಿ 2ನೇ ಗೇಮ್ ಅನ್ನು 21-16 ಅಂತರದಿಂದ ಗೆದ್ದುಕೊಂಡರು.

ಮಾಳವಿಕಾ ಸೋಲಿನೊಂದಿಗೆ ಈ ವರ್ಷಾಂತ್ಯದ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಸೋತ ಹೊರತಾಗಿಯೂ ಮಾಳವಿಕಾ ಅವರು ತನ್ನ ಚೊಚ್ಚಲ ಬಿಡಬ್ಲ್ಯುಎಫ್ ಸೂಪರ್ 1000 ಪಂದ್ಯಾವಳಿಯಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News