ರಾಷ್ಟ್ರೀಯ ರೈಫಲ್ ಸಂಸ್ಥೆ ಅಧ್ಯಕ್ಷರಾಗಿ ಕಾಲಿಕೇಶ್ ನಾರಾಯಣ್ ಸಿಂಗ್ ಆಯ್ಕೆ

Update: 2024-09-21 15:46 GMT

ಕಾಲಿಕೇಶ್ ನಾರಾಯಣ್ ಸಿಂಗ್ ದೇವೊ | PC : X \ @PBSHABD

ಹೊಸದಿಲ್ಲಿ : ರಾಷ್ಟ್ರೀಯ ರೈಫಲ್ ಸಂಸ್ಥೆ(ಎನ್‌ಆರ್‌ಎಐ)ಅಧ್ಯಕ್ಷರಾಗಿ ಕಾಲಿಕೇಶ್ ನಾರಾಯಣ್ ಸಿಂಗ್ ದೇವೊ ಶನಿವಾರ ಆಯ್ಕೆಯಾಗಿದ್ದಾರೆ.

ಶನಿವಾರ ನಡೆದ ಚುನಾವಣೆಯಲ್ಲಿ ಕಾಲಿಕೇಶ್ ಅವರು ಪ್ರತಿಸ್ಪರ್ಧಿ ವಿಕೆ ಧಲ್‌ರನ್ನು 36-21 ಅಂತರದಿಂದ ಮಣಿಸಿದರು.

ಸರಕಾರದ ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ರಣಿಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಕಳೆದ ವರ್ಷದಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಒಡಿಶಾದ ಮಾಜಿ ಸಂಸದ ಕಾಲಿಕೇಶ್ ಎನ್‌ಆರ್‌ಎಐನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರು.

ರಾಷ್ಟ್ರೀಯ ಕ್ರೀಡೆಗಳ ಸಂಹಿತೆಯ ಪ್ರಕಾರ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಮುಖ್ಯಸ್ಥರು 12 ವರ್ಷಗಳಿಂಗಿಂತ ಹೆಚ್ಚು ಸಮಯ ಹುದ್ದೆಯಲ್ಲಿರಬಾರದು ಎಂದು ಕಳೆದ ವರ್ಷ ಕ್ರೀಡಾ ಸಚಿವಾಲಯ ನಿರ್ದೇಶನ ನೀಡಿತ್ತು.

ರಣಿಂದರ್ ಸಿಂಗ್ ಅಧ್ಯಕ್ಷರಾಗಿ 12 ವರ್ಷ ಪೂರೈಸಿದ್ದಾರೆ ಎಂದು ಸಚಿವಾಲಯವು ಬೆಟ್ಟು ಮಾಡಿತ್ತು. 2010ರಿಂದ 2022ರ ತನಕ ಅಧ್ಯಕ್ಷರಾಗಿದ್ದ ರಣಿಂದರ್ ಕಳೆದ ವರ್ಷದ ಎಪ್ರಿಲ್‌ನಲ್ಲಿ ರಾಜೀನಾಮೆ ನೀಡಿದ ನಂತರ ಹಿರಿಯ ಉಪಾಧ್ಯಕ್ಷ ಕಾಲಿಕೇಶ್ ಎನ್‌ಆರ್‌ಎಐ ಅಧ್ಯಕ್ಷರಾಗಿದ್ದರು.

ಕಾಲಿಕೇಶ್ 2025ರ ತನಕ ಅಧ್ಯಕ್ಷರಾಗಿ ಉಳಿದುಕೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News