ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ 100ನೇ ಪಂದ್ಯ ಆಡಿದ ಡೇವಿಡ್ ವಾರ್ನರ್

Update: 2024-02-09 16:45 GMT

Photo: X \ @mipaltan

ಹೊಸದಿಲ್ಲಿ : ಆಸ್ಟ್ರೇಲಿಯದ ಹಿರಿಯ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮಹತ್ವದ ಮೈಲಿಗಲ್ಲು ತಲುಪಿದ್ದು, ಎಲ್ಲ ಮೂರು ಮಾದರಿಯ ಕ್ರಿಕೆಟ್ ನಲ್ಲಿ 100 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ತನ್ನ ದೇಶದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯದ ಪರ ಆಡುವ ಮೂಲಕ ವಾರ್ನರ್ ಈ ಸಾಧನೆ ಮಾಡಿದರು.

100ನೇ ಅಂತರ್ರಾಷ್ಟ್ರೀಯ ಪಂದ್ಯವನ್ನು ಆಡಿರುವ ಆಸ್ಟ್ರೇಲಿಯದ ಮೂರನೇ ಆಟಗಾರನಾಗಿರುವ ವಾರ್ನರ್ ಮಾಜಿ ನಾಯಕ ಆ್ಯರೊನ್ ಫಿಂಚ್(103 ಪಂದ್ಯಗಳು) ಹಾಗೂ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(100 ಪಂದ್ಯಗಳು)ಅವರಿದ್ದ ಗುಂಪಿಗೆ ಸೇರಿದರು.

ಭಾರತದ ವಿರಾಟ್ ಕೊಹ್ಲಿ ಹಾಗೂ ನ್ಯೂಝಿಲ್ಯಾಂಡ್ ನ ರಾಸ್ ಟೇಲರ್ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ತಮ್ಮ ದೇಶದ ಪರ 100 ಪಂದ್ಯಗಳನ್ನು ಆಡಿರುವ ಆಟಗಾರರಾಗಿದ್ದಾರೆ. ವಾರ್ನರ್ ಇದೀಗ ಈ ಇಬ್ಬರನ್ನು ಒಳಗೊಂಡಿರುವ ಎಲೈಟ್ ಕಂಪೆನಿಗೆ ಸೇರ್ಪಡೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News