ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್: ಭಾರತಕ್ಕೆ ಮೊದಲ ಇನ್ನಿಂಗ್ಸ್ ‌ನಲ್ಲಿ 190 ರನ್ ಗಳ ಮುನ್ನಡೆ

Update: 2024-01-27 05:59 GMT

Photo:X/BCCI

ಹೈದರಾಬಾದ್: 175 ರನ್ ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದ ಭಾರತ ತಂಡವು ಕೇವಲ 15 ರನ್ ಅನ್ನು ತನ್ನ ಮೊತ್ತಕ್ಕೆ ಸೇರಿಸುವುದರೊಳಗೆ ತನ್ನ ಉಳಿದ ಮೂರು ವಿಕೆಟ್ ಕಳೆದುಕೊಂಡು 436 ರನ್ ಗೆ ತನ್ನ ಇನಿಂಗ್ಸ್ ಅಂತ್ಯಗೊಳಿಸಿತು.

ಅಕ್ಷರ್ ಪಟೇಲ್ ಅವರೊಂದಿಗೆ ಮೂರನೆಯ ದಿನದ ಆಟವನ್ನು ಮುಂದುವರಿಸಿದ ರವೀಂದ್ರ ಜಡೇಜಾ ತಮ್ಮ ಮೊತ್ತಕ್ಕೆ ಕೇವಲ 5 ರನ್ ಸೇರಿಸಿ ಜೋ ರೂಟ್ ಅವರ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ಇದಾದ ನಂತರ ಕ್ರೀಸ್ ಗೆ ಬಂದ ಜಸ್‍ಪ್ರೀತ್ ಬೂಮ್ರಾ ಜೋ ರೂಟ್ ಅವರ ಬಾಲಿಗೆ ಕ್ಲೀನ್ ಬೌಲ್ಡ್ ಆದರು. ನಂತರದ ಓವರ್ ನಲ್ಲಿ ರೆಹಾನ್ ಅಹ್ಮದ್ ಎಸೆತದಲ್ಲಿ ಅಕ್ಷರ್ ಪಟೇಲ್ ಬೌಲ್ಡ್ ಆಗುವ ಮೂಲಕ ಭಾರತದ ಪ್ರಥಮ ಇನಿಂಗ್ಸ್ 436 ರನ್ ಗೆ ಅಂತ್ಯಗೊಂಡಿತು.

ಇಂಗ್ಲೆಂಡ್ ಪರ ಯಶಸ್ವಿ ಬೌಲರ್ ಆಗಿ ಹೊಮ್ಮಿದ ಜೋ ರೂಟ್, 29 ಓವರ್ ಗಳಲ್ಲಿ 79 ರನ್ ನೀಡಿ, 4 ಪ್ರಮುಖ ವಿಕೆಟ್ ಗಳನ್ನು ಕಿತ್ತರು.

ಇತ್ತೀಚಿನ ವರದಿಗಳ ಪ್ರಕಾರ, ತನ್ನ ಎರಡನೆ ಇನಿಂಗ್ಸ್ ಪ್ರಾರಂಭಿಸಿರುವ ಇಂಗ್ಲೆಂಡ್, 10 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದೆ. ಆರ್. ಅಶ್ವಿನ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡುವ ಮೂಲಕ ಆರಂಭಿಕ ಬ್ಯಾಟರ್ 31 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: ಪ್ರಥಮ ಇನಿಂಗ್ಸ್: 246, ಎರಡನೆ ಇನಿಂಗ್ಸ್: 49/1

ಭಾರತ: ಪ್ರಥಮ ಇನಿಂಗ್ಸ್: 436

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News